ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಗೆ ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಸೇರ್ಪಡೆಗೊಳಿಸಲು ಬಿಡುವುದಿಲ್ಲ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ನಗರದಲ್ಲಿ ಈಟಿವಿ ಭಾರತ ಜತೆಗೆ ಮಾತನಾಡಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸಿರಿಗೇರಿ ಪನ್ನರಾಜ ಹಾಗೂ ಇತರ ಮುಖಂಡರು, ಈ ಹಿಂದೆ ಕೊಪ್ಪಳ ಜಿಲ್ಲೆಗೆ ಅಂದಾಜು 60 ಊರುಗಳನ್ನು ಸೇರ್ಪಡೆಗೊಳಿಸಲು ಹೋದಾಗ, ನಾವೆಲ್ಲರೂ ಒಗ್ಗೂಡಿ ಹೋರಾದ್ದೆವು.
ಆದರೀಗ ಬಳ್ಳಾರಿ ಜಿಲ್ಲೆಗೆ ಮೊಳಕಾಲ್ಮೂರು ತಾಲೂಕನ್ನು ಸೇರ್ಪಡೆಗೊಳಿಸಲು ಬಿಡುವುದಿಲ್ಲ. ಪ್ರತ್ಯೇಕ ವಿಜಯನಗರ ಜಿಲ್ಲೆಯ ರಚನೆಗೆ ನಮ್ಮ ವಿರೋಧವಿದೆ. 371(ಜೆ) ಕಲಂ ಅಧಿನಿಯಮವು ನೂತನ ಜಿಲ್ಲೆಗೆ ಅನ್ವಯಿಸುವುದಿಲ್ಲ ಎಂದರು.
ಯಾವುದೇ ಮುನ್ಸೂಚನೆ ಹಾಗೂ ಜನಾಭಿಪ್ರಾಯ ಸಂಗ್ರಹಿಸಿದೇ ನೂತನ ಜಿಲ್ಲೆಯನ್ನಾಗಿ ವಿಜಯನಗರವನ್ನು ಘೋಷಣೆ ಮಾಡಿರುವುದಕ್ಕೆ ಉಭಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.