ETV Bharat / city

ಕೊರೊನಾ ಎಫೆಕ್ಟ್​: ಹಂಪಿ ವಿರೂಪಾಕ್ಷೇಶ್ವರ ಭಕ್ತರ ಸಂಖ್ಯೆ ಇಳಿಮುಖ

author img

By

Published : Aug 28, 2020, 10:28 PM IST

ಕೊರೊನಾ ವೈರಸ್​ನಿಂದ ಹಂಪಿ ವಿರೂಪಾಕ್ಷೇಶ್ವರ ದೇವರಿಗೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಆನ್​ಲೈನ್ ಮೂಲಕ ಪೂಜೆ ಮಾಡಿಸಿದ್ದು, ಭಕ್ತರ ಸಂಖ್ಯೆ ಕಡಿಮೆಯಾಗಿದ್ದರಿಂದ ಧಾರ್ಮಿಕ ದತ್ತಿ ಇಲಾಖೆಯ ಆದಾಯಕ್ಕೆ ಹೊಡೆತ ಬಿದ್ದಿದೆ.

number of devotees of Hampi Virupakshaswara is in decline
ಕೊರೊನಾ ಎಫೆಕ್ಟ್​: ಹಂಪಿ ವಿರೂಪಾಕ್ಷೇಶ್ವರ ಭಕ್ತರ ಸಂಖ್ಯೆ ಇಳಿಮುಖ

ಹೊಸಪೇಟೆ (ಬಳ್ಳಾರಿ): ಕೊರೊನಾದಿಂದಾಗಿ ರಾಜ್ಯ ಸರ್ಕಾರ ಭಕ್ತರಿಗಾಗಿ ಆನ್​ಲೈನ್ ಪೂಜಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.‌ ಆದರೆ, ಭಕ್ತರಿಂದ ನಿರೀಕ್ಷಿತ ಪ್ರೋತ್ಸಾಹ ಸಿಗದಿದ್ದರಿಂದ ಆನ್​​ಲೈನ್ ಪೂಜೆ ನಾಮಾಕಾವಸ್ತೆಯಾಗಿದೆ.

ಕೊರೊನಾ ಕಾರಣದಿಂದಾಗಿ ಮುಜರಾಯಿ ಇಲಾಖೆಯ ದೇವಸ್ಥಾನಗಳ ಪ್ರವೇಶಕ್ಕೆ ಮಾರ್ಚ್ 22ರಿಂದ ನಿಷೇಧ ಹೇರಲಾಗಿತ್ತು. ಏಪ್ರಿಲ್​, ಮೇ ತಿಂಗಳು ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ.‌ ಲಾಕ್​ಡೌನ್ ಸಡಿಲಿಕೆಯಾದ ಬಳಿಕ ಅಂದರೆ ಜೂನ್​ 8ರಿಂದ ಆನ್​ಲೈನ್​ನಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಆನ್​ಲೈನ್ ಪೂಜೆಗೆ ಭಕ್ತರಿಂದ ಪ್ರೋತ್ಸಾಹ ಸಿಗುತ್ತಿಲ್ಲ. ಸತತ ಮೂರು ತಿಂಗಳಿಂದ ಹಂಪಿಯ ವಿರೂಪಾಕ್ಷೇಶ್ವರ ದೇವರಿಗೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಆನ್​ಲೈನ್ ಮೂಲಕ ಪೂಜೆ ಮಾಡಿಸಿದ್ದಾರೆ.

ಆನ್​ಲೈನ್ ಪೂಜೆ ಮಾಡಿಸುವುದು ಹೇಗೆ?:

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯಿ ದತ್ತಿ ಇಲಾಖೆಗಳು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಇ-ಕಾಣಿಕೆ ಹಾಗೂ ಆನ್​ಲೈನ್ ಬುಕ್ಕಿಂಗ್ ಮಾಡಲು ಮೇ 24ರಿಂದ ಅವಕಾಶ ಕಲ್ಪಿಸಿದೆ. ಜೊತೆಗೆ ಅಧಿಕೃತ ವೆಬ್​ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ಪ್ಯೂರ್ ಪ್ರೇಯರ್ ಆ್ಯಪ್​ನ್ನು ಸರ್ಕಾರ ಬಿಡುಗಡೆ ಮಾಡಿದೆ.‌ ಇದರಲ್ಲಿ ಭಕ್ತರ ಹೆಸರು, ದೇವಸ್ಥಾನ ಹಾಗೂ ಸೇವೆಯನ್ನು ಬುಕ್​ ಮಾಡಬೇಕು.

ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಈ ಹಿಂದೆ ಪ್ರತಿ ಅಮಾವಾಸ್ಯೆ ಹಾಗೂ ಹಬ್ಬ-ಹರಿದಿನಗಳಲ್ಲಿ ಸಾವಿರಾರು‌ ಜನರು ಆಗಮಿಸಿ, ದರ್ಶನ ಪಡೆದುಕೊಳ್ಳುತ್ತಿದ್ದರು.‌ ಕೊರೊನಾ ವೈರಸ್​ನಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿದೆ. ಭಕ್ತರ ಸಂಖ್ಯೆ ಕಡಿಮೆಯಾಗಿದ್ದರಿಂದ ಧಾರ್ಮಿಕ ದತ್ತಿ ಇಲಾಖೆಯ ಆದಾಯಕ್ಕೆ ಹೊಡೆತ ಬಿದ್ದಿದೆ. ಹಂಪಿ ವಿರೂಪಾಕ್ಷೇಶ್ವರ ದೇವರಿಗೆ ಆನ್​ಲೈನ್​ ಮೂಲಕ ಬೆಳೆಣಿಕೆಷ್ಟು ಭಕ್ತರು ಮಾತ್ರ ಅಭಿಷೇಕ, ಸಂಕಲ್ಪ ಮಾಡಿಸಿದ್ದಾರೆ ಎಂದು ದೇವಸ್ಥಾನದ ಇಒ ಪ್ರಕಾಶರಾವ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.