ಬಳ್ಳಾರಿ: ಡಿ.ಕೆ.ಶಿವಕುಮಾರ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬರಲಿ ಮತ್ತು ಜನರ ಸೇವೆ ಮಾಡಲು ಸಿದ್ಧರಾಗಲಿ ಎಂದು ಕನಕ ದುಗಮ್ಮ ದೇವಿಗೆ ವಿಶೇಷ ಪೂಜೆಯನ್ನು ನ್ಯಾಷನಲ್ ಸ್ಟೂಡೆಂಟ್ ಯುನಿಯನ್ ಆಫ್ ಇಂಡಿಯಾದ ಬಳ್ಳಾರಿ ಜಿಲ್ಲಾಧ್ಯಕ್ಷ ಸಿದ್ದು ಹಳ್ಳೆ ಗೌಡ ನೆರವೇರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಇಂದು ಬೆಳಗ್ಗೆ (ಎನ್.ಎಸ್.ಯು.ಐ) ನ್ಯಾಷನಲ್ ಸ್ಟೂಡೆಂಟ್ ಯುನಿಯನ್ ಆಫ್ ಇಂಡಿಯಾದ ವತಿಯಿಂದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಹೊರ ಬರಲಿ ಮತ್ತು ಜನರ ಸೇವೆ ಮಾಡಲು ಸಿದ್ಧರಾಗಲು ಕನಕ ದುಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಈ ಸಮಯದಲ್ಲಿ ಬಳ್ಳಾರಿ ಜಿಲ್ಲೆಯ ನ್ಯಾಷನಲ್ ಸ್ಟೂಡೆಂಟ್ ಯುನಿಯನ್ ಆಫ್ ಇಂಡಿಯ ಸದಸ್ಯರು ಭಾಗವಹಿಸಿದ್ದರು.