ಬಳ್ಳಾರಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಬಳ್ಳಾರಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ಕೌಲ್ ಬಜಾರ್ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸೋಡಿಯಂ ಹೈಪರ್ಲೈಟ್ ಲಿಕ್ವಿಡ್ (ರೋಗ ನಿರೋಧಕ) ಸಿಂಪಡಣೆ ಮಾಡಲಾಯಿತು.
ಅಗ್ನಿಶಾಮಕ ದಳದ ಅಧಿಕಾರಿ ಬಸವರಾಜು ನೇತೃತ್ವದಲ್ಲಿ ಕೌಲ್ ಬಜಾರ್ನ ಮೊದಲ ಗೇಟ್ನಿಂದ ಹಿಡಿದು ಆರೇಳು ಸ್ಥಳಗಳಿಗೆ ಸಿಂಪಡಣೆ ಮಾಡಲಾಯಿತು. ಇಲ್ಲಿನ ಶಾಸಕ ಬಿ.ನಾಗೇಂದ್ರ ಖುದ್ದು ಮುಂದೆ ನಿಂತುಕೊಂಡೇ ಕೆಲಸ ಮಾಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕೊರೊನಾ ವೈರಸ್ ತಡೆಗೆ ಕೌಲ್ ಬಜಾರ್ ಪ್ರದೇಶದಲ್ಲಿ ಲಿಕ್ವಿಡ್ ಸಿಂಪಡಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಮನೆಯಿಂದ ಹೊರಗೆ ಬರಬಾರದು ಎಂದು ಮನವಿ ಮಾಡಿದರು.