ಹೊಸಪೇಟೆ : ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿದರೂ ಸಹ ನಗರದಲ್ಲಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ಲಾಕ್ ಡೌನ್ ಪಾಲನೆ ಮಾಡುತ್ತಿದ್ದಾರೆ.
ನಗರದ ಮೇನ್ ಬಜಾರ್, ವಾಲ್ಮೀಕಿ ವೃತ್ತ, ಅಂಬೇಡ್ಕರ್ ಸರ್ಕಲ್, ಶಾನಭಾಗ ವೃತ್ತ, ಎಪಿಎಂಸಿ ಮಾರುಕಟ್ಟೆ ಸಡಿಲಿಕೆ ಇದ್ದರೂ ಮುಚ್ಚಿರುವುದು ಕಂಡು ಬಂತು. ಕೃಷಿ ಚಟುವಟಿಯ ಅಂಗಡಿಗಳು, ರಾಸಾಯನಿಕ ಗೊಬ್ಬರದ ಅಂಗಡಿಗಳು, ಸಿಮೆಂಟ್, ಜಲ್ಲಿ, ಕಬ್ಬಿಣ, ಟೈಲ್ಸ್, ಎಲೆಕ್ಟ್ರಾನಿಕ್ ಅಂಗಡಿಗಳು, ಎಪಿಎಂಸಿ ಮಳಿಗೆಗಳನ್ನು ತೆಗೆಯಬಹುದು ತೋಟಗಾರಿಕೆ ಸಂಬಂಧಿಸಿ ವಸ್ತಗಳನ್ನು ಮಾರಾಟ ಮಾಡಬಹುದು ಎಂದು ಸರ್ಕಾರ ಆದೇಶಿಸಿತ್ತು.
ಆದರೆ, ಸಡಿಲಿಕೆ ನೀಡಿದರೂ ಸಹ ವ್ಯಾಪಾರಸ್ಥರು ಹೊರಗಡೆ ಬರದೇ ಮಳಿಗೆಗಳನ್ನು ಬಂದ್ ಮಾಡಿದ್ದಾರೆ. ಸಾರ್ವಜನಿಕರು ರಸ್ತೆಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಓಡಾಡುತ್ತಿದ್ದು, ಜನರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.