ETV Bharat / city

ಮುಂದಿನ ವರ್ಷದ ಹಂಪಿ ಉತ್ಸವಕ್ಕೆ ಪ್ರಧಾನಿ ಮೋದಿ ಕರೆತರಲು ಪ್ರಯತ್ನಿಸುವೆ: ಸಚಿವ ಸಿ.ಟಿ.ರವಿ

author img

By

Published : Jan 10, 2020, 5:02 PM IST

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೃಷಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಮಾರಾಟ ಮಳಿಗೆ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಚಾಲನೆ ನೀಡಿದರು.

Tourism minister C.T.Ravi
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

ಹೊಸಪೇಟೆ: ತಾಲೂಕಿನ ಹಂಪಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೃಷಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ಪುಸ್ತಕ ಮಾರಾಟ ಮಳಿಗೆ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಈ ಬಾರಿಯ ಐತಿಹಾಸಿಕ ಹಂಪಿ ಉತ್ಸವದಲ್ಲಿ 900 ಕಲಾವಿದರು ಹಾಗೂ 110 ಕಲಾ ತಂಡಗಳು ಭಾಗವಹಿಸಲಿವೆ. ಮುಂದಿನ ವರ್ಷದ ಹಂಪಿ ಉತ್ಸವಕ್ಕೆ ನಿಗದಿತ ದಿನಾಂಕ ಮಾಡುವ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಅಲ್ಲದೆ, ಪ್ರವಾಸೋದ್ಯಮ ಸಚಿವನಾಗಿ ಮುಂದುವರಿದರೆ ಪ್ರಧಾನಿ ಮೋದಿ ಅವರನ್ನು ಉತ್ಸವಕ್ಕೆ ಕರೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವದ ಮೆರುಗು ಮರುಕಳಿಸುವಂತೆ ಉತ್ಸವ ಮಾಡಲಾಗುತ್ತದೆ. ಉತ್ಸವಗಳನ್ನು ಮಾಡಲು ಮುಖ್ಯಮಂತ್ರಿ ಆದವರಿಗೆ ಮನಸ್ಸು, ಆಸಕ್ತಿ ಇರಬೇಕು. ಹಬ್ಬ-ಹರಿದಿನಗಳನ್ನು ಆಚರಿಸುವುದರಿಂದ ಅವುಗಳ ಐತಿಹಾಸಿಕ ಪರಂಪರೆ ನೆನಪಾಗುತ್ತದೆ. ಅದರ ಬಗ್ಗೆ ತಿಳಿಯಲು ಸಹಾಯವಾಗುತ್ತದೆ. ಉತ್ಸವಗಳಿಗಾಗಿ ಇಂತಿಷ್ಟೇ ಅನುದಾನ ನಿಗದಿಪಡಿಸಬೇಕು ಎಂಬ ಅಂದಾಜು ಇದೆ. ಅದಕ್ಕೆ ತಕ್ಕಂತೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಹಂಪಿಯನ್ನು ವಿಶ್ವದಲ್ಲೇ ಮಾದರಿ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕಿದೆ. ಹಂಪಿ ನಮ್ಮ ರಾಜ್ಯದಲ್ಲಿರುವುದು ಸಂತೋಷದ ವಿಷಯ. ವಿಜಯನಗರ ಸಾಮ್ರಾಜ್ಯ ಕಲೆ, ಸಂಗೀತ ಸಾಹಿತ್ಯಕ್ಕೆ ಹೆಸರುವಾಸಿಯಾಗಿತ್ತು. ಇಂತಹ ಸ್ಥಳಗಳನ್ನು ಅಭಿವೃದ್ಧಿಗೊಳಿಸುವುದು ಸರ್ಕಾರ ಮತ್ತು ಸಾರ್ವಜನಿಕರ ಮುಖ್ಯ ಕರ್ತವ್ಯ ಎಂದರು.

Intro:ಐತಿಹಾಸಿಕ ಹಂಪಿಯನ್ನು ವಿಶ್ವದಲ್ಲಿ ಮಾದರಿ ಸಥಳವನ್ನಾಗಿ ಮಾಡುವೆ : ಸಚಿವ ಸಿ.ಟಿ ರವಿ
ಹೊಸಪೇಟೆ : ಐತಿಹಾಸಿಕ ಹಂಪಿ 2020 ಉತ್ಸವಕ್ಕೆ ಜಿಲ್ಲೆಗೆ 900 ಕಲಾವಿದರು ಭಾಗವಹಿಸಿದ್ದರಾರೆ.110 ಕಲಾ ತಂಡಗಳು ಉತ್ಸವಕ್ಕೆ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಹಂಪಿ ಉತ್ಸವಕ್ಕೆ ನಿಗದಿತ ದಿನಾಂಕನ್ನು ಮುಂದಿನ ವರ್ಷ ನಿಗದಿ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಮಾತನಾಡಿದರು.

Body: ತಾಲ್ಲೂಕಿನ ವಿಜಯ ನಗರ ಸಾಮ್ರಾಜ್ಯದ ಹಂಪಿಯಲ್ಲಿ ಇಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಜಿಲ್ಲೆಯ ಮೀನುಗಾರಿಗೆ ಇಲಾಖೆಯ ಪುಸ್ತಕ ಮಾರಾಟ ಮಳಿಗೆ ಕೃಷಿ ಇಲಾಖೆ ಫಲ ಪುಸ್ಪ ಪ್ರದರ್ಶನ ಮಳಿಗೆ ಗಳಿಗೆ ಚಾಲನೆಯನ್ನು ನೀಡಿ ಮಾತನಾಡಿದರು. ವಿಜಯನಗರ ಸಾಮ್ರಾಜ್ಯದವ ಗತ ಕಾಲದ ವೈಭವದ ಮೆರಗು ಮತ್ತೆ ಮರುಕಳಿಸುವಂತೆ ಉತ್ಸವದ ಮಾಡಲಾಗುತ್ತದೆ. ಉತ್ಸವಗಳನ್ನು ಮಾಡುವುದಕ್ಕೆ ಮುಖ್ಯಮಂತ್ರಿಯಾದವರಿಗೆ ಮನಸಿರಬೇಕು ಎಂದರು.

ಹಬ್ಬ ಮತ್ತು ಹರಿದಿನಗಳನ್ನು ಮಾಡುವುದರಿಂದ ನಮ್ಮ ಐತಿಹಾಸಿಕ ಪರಂಪರೆಯು ನೆನಾಪಾಗುತ್ತದೆ. ಅವರ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ.ಕೆಲ ಮಾಜಿ ಮುಖ್ಯಮಂತ್ರಿಯಾದವರು ಇಂತಹ ಉತ್ಸವ ಮಾಡುವಯದರಿಂದ ದುಡ್ಡು ವ್ಯರ್ಥವಾಗುತ್ತದೆ ಎನ್ನುತ್ತಾರೆ. ಅದಕ್ಕಾಗಿ ಉತ್ಸವಗಳಿಗೆ ಹಣವನ್ನು ನಿಗದಿಪಡಿಸುತ್ತದೆ ಮಾಡಬೇಕು.ಮುಂದಿನ ವರ್ಷದಲ್ಲಿ ಹಂಪಿ ಉತ್ಸವಕ್ಕೆ ದಿನಾಂಕಗಳ ಬಗ್ಗೆ ಚರ್ಚೆಯನ್ನು ಮಾಡಲಾಗುತ್ತದೆ ಎಂದು ಮಾತನಾಡಿದರು.

ಹಂಪಿಯನ್ನು ವಿಶ್ವದಲ್ಲಿ ಮಾದಿರಿಯ ಸ್ಥಳವನ್ನಾಗಿ ಮಾಡಬೇಕಿದೆ. ರಾಜ್ಯದಲ್ಲಿ ಹಂಪಿ ಇರುವುದು ನಮಗೆಲ್ಲರಿಗೂ ಸಂತೋಷದವಾಗಿದೆ. ವಿಜಯ ನಗರ ಸಾಮ್ರಾಜ್ಯದಲ್ಲಿ ಅರಸರು ಕಲೆ ಸಂಗೀತ ಸಾಹಿತ್ಯಕ್ಕೆ ಹೆಸರುವಾಗಿದೆ ಇಂತಹ ಸಥಳಗನ್ನು ಅಭಿವೃದ್ಧಿ ಮಾಡುವುದು ಸರಕಾರ ಮತ್ತು ಸಾರ್ವಜನಿಕರ ಮುಖ್ಯ ಕರ್ತವ್ಯವಾಗಿದೆ ಎಂದರು.

Conclusion:KN_HPT_1_SAHASA_KREEDEYE_DC_CHALANE_SCRIPT_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.