ಬಳ್ಳಾರಿ: ಪ್ರಚೋದನಕಾರಿ ಭಾಷಣ ಆರೋಪ ಪ್ರಕರಣ ಹಿನ್ನೆಲೆ ಬಂಧನ ಭೀತಿ ಎದುರಿಸುತ್ತಿರುವ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಸಲ್ಲಿಸಿದ್ದ ಬೇಲ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಕೇಂದ್ರದ ಪೌರತ್ವ ಕಾಯ್ದೆಯ ಪರ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ಬಳ್ಳಾರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿಂದು ಅರ್ಜಿ ವಿಚಾರಣೆ ನಡೆಸಲಾಯ್ತು.
ಬಂಧನ ಭೀತಿಯಿಂದ ಶಾಸಕರು ಸಲ್ಲಿಸಿದ್ದ ಬೇಲ್ ಅರ್ಜಿಯನ್ನು ಕೂಡಾ ನ್ಯಾಯಾಲಯ ವಜಾಗೊಳಿಸಿದೆ.