ಬಳ್ಳಾರಿ: ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಜಿಲ್ಲಾಧಿಕಾರಿ ಮಂಜುನಾಥ ಅವರಗೆ ಮನವಿ ಸಲ್ಲಿಸಿದ್ದಾರೆ.
ರೈತರು ಬೆಳೆದ ಭತ್ತವನ್ನು ಕಟಾವ್ ಮಾಡುತ್ತಿದ್ದಾರೆ ಅದಕ್ಕಾಗಿ ಭತ್ತ ಖರೀದಿ ಕೇಂದ್ರಗಳನ್ನು ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಿರುಗುಪ್ಪ ತಾಲೂಕಿನಲ್ಲಿ ಹಿಂದಿನ ವರ್ಷ ಭತ್ತ ಕಟಾವ್ ಮಾಡಿ ಮುಗಿದ ನಂತರ ಖರೀದಿ ಕೇಂದ್ರ ಆರಂಭ ಮಾಡಿದ್ದಾರೆ. ಇದರಿಂದಾಗಿ ರೈತರಿಗೆ ಭತ್ತ ಮಾರಾಟದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. 2200 ರೂಪಾಯಿ ಕ್ವಿಂಟಲ್ ಇರುವ ಭತ್ತ,1600 ರೂಪಾಯಿ, ಹತ್ತಿ 3500 ರಿಂದ 4000 ರೂಪಾಯಿ, ತೊಗರಿಬೆಳೆ 5600 ರಿಂದ 6000 ಸಾವಿರ ರೂಪಾಯಿ ಇದೆ.
ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೇ 200 ರಿಂದ 300 ರೂಪಾಯಿ ಕ್ವಿಂಟಾಲ್ ಗೆ ಕಡಿಮೆ ಯಾಗುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಾರೆ ಎಂದರು. ಭತ್ತದ ಜೊತೆಗೆ ಹತ್ತಿ, ಜೋಳ, ಮೆಣಸಿನಕಾಯಿ, ಕಡ್ಲೆ ಈ ಎಲ್ಲಾ ಬೆಳೆಗಳ ಕಟಾವ್ ಆರಂಭವಾಗಿದೆ ತಕ್ಷಣ ಸರ್ಕಾರದ ಕಡೆಯಿಂದ ಖರೀದಿ ಕೇಂದ್ರಗಳನ್ನು ಆರಂಭ ಮಾಡಬೇಕೆಂದು ಮನವಿ ಮಾಡಿಕೊಂಡರು.