ಹೊಸಪೇಟೆ: ಪತಿ, ಪತ್ನಿ ಸಾವಿನಲ್ಲೂ ಒಂದಾದ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪದ ಕಂಚೋಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊಸಮನಿ ಲಕ್ಷ್ಮೀ ದೇವಿ (70) ಅವರು ನಿನ್ನೆ ಮೃತಪಟ್ಟಿದ್ದಾರೆ. ಹೆಂಡತಿ ಸಾವಿನಿಂದ ಮಾನಸಿಕವಾಗಿ ನೊಂದ ಹೊಸಮನಿ ಮಹಾದೇವಪ್ಪ (75) ಕೂಡ ಸಾವನ್ನಪ್ಪಿದ್ದಾರೆ. ಸಾವಿನ ಯಾತ್ರೆಯಲ್ಲೂ ಈ ದಂಪತಿ ಜತೆಯಾಗಿರುವುದು ನೋಡುಗರ ಕಣ್ಣಂಚಲಿ ನೀರನ್ನು ತರಿಸಿತು.
ಮೃತರ ಅಂತ್ಯಕ್ರಿಯೆಯನ್ನು ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗಿದ್ದು, ಮೃತರಿಗೆ ಒಬ್ಬ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವಿದೆ.