ಬಳ್ಳಾರಿ : ಕೊರೊನಾ ವೈರಸ್ ಎಫೆಕ್ಟ್‌ನಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆದರೂ ಕುಡುಕರ ಪರದಾಟ ನೋಡಲಾಗ್ತಿಲ್ಲ. ಹೂವಿನ ಹಡಗಲಿ ತಾಲೂಕಿನ ಹರವಿ ಗ್ರಾಮದಲ್ಲಿ ಮದ್ಯದ ಅಂಗಡಿಯೊಂದರ ಮುಂದೆ ಪಕ್ಕದೂರಿನ ಗ್ರಾಮಸ್ಥರು ಸಾಲಿನಲ್ಲಿ ನಿಂತು ಎಣ್ಣೆ ಖರೀದಿಸಲು ಮುಂದಾದಾಗ ಸ್ಥಳೀಯರು ಅವರೊಂದಿಗೆ ವಾಗ್ವಾದಕ್ಕಿಳಿದ ಪ್ರಸಂಗ ಕೂಡ ನಡೆಯಿತು.
ಹರವಿ ಗ್ರಾಮದ ಮದ್ಯದ ಅಂಗಡಿ ತೆರೆದಿರೋದರ ಬಗ್ಗೆ ಮಾಹಿತಿ ಪಡೆದ ಸುತ್ತಮುತ್ತಲಿನ ಗ್ರಾಮಸ್ಥರು, ನೇರವಾಗಿ ಹರವಿ ಗ್ರಾಮಕ್ಕೆ ಆಗಮಿಸಿ ಮದ್ಯ ಖರೀದಿಸಲು ಸಾಲಿನಲ್ಲಿ ನಿಂತಿದ್ದರು. ಅದನ್ನ ಕಂಡ ಗ್ರಾಮಸ್ಥರು ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದಾಗಿ ಬೇರೆ ಬೇರೆ ಗ್ರಾಮಗಳಿಂದ ಬಂದ ಜನರೊಂದಿಗೆ ವಾಗ್ವಾದಕ್ಕಿಳಿದರು. ತಮ್ಮೂರಿಗೆ ಬರದಂತೆ ಎಚ್ಚರಿಕೆಯನ್ನೂ ಕೂಡ ನೀಡಿದರು.