ETV Bharat / city

ತೆರಿಗೆ ವಂಚನೆ ಆರೋಪ; ಕ್ಲಾಸ್​ ಒನ್​ ಗುತ್ತಿಗೆದಾರನ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ದಾಳಿ - ಬಳ್ಳಾರಿಯಲ್ಲಿ ಕ್ಲಾಸ್ ಒನ್ ಗುತ್ತಿಗೆದಾರನ ಮೇಲೆ ದಾಳಿ

ಕ್ಲಾಸ್​ ಒನ್​ ಗುತ್ತಿಗೆದಾರನ ಮನೆ ಮತ್ತು ಕಚೇರಿ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ಕಂಡು ಬಂದಿದೆ.

Central Income Tax Department raids on Class One contractor, raids on Class One contractor in Bellary, Bellary crime news, ಕ್ಲಾಸ್ ಒನ್ ಗುತ್ತಿಗೆದಾರನ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ದಾಳಿ, ಬಳ್ಳಾರಿಯಲ್ಲಿ ಕ್ಲಾಸ್ ಒನ್ ಗುತ್ತಿಗೆದಾರನ ಮೇಲೆ ದಾಳಿ, ಬಳ್ಳಾರಿ ಅಪರಾಧ ಸುದ್ದಿ,
ತೆರಿಗೆ ವಂಚನೆ ಆರೋಪ
author img

By

Published : Jun 15, 2022, 2:08 PM IST

ವಿಜಯನಗರ: ಕ್ಲಾಸ್ ಒನ್ ಗುತ್ತಿಗೆದಾರ ಹನುಮಂತಪ್ಪ ಕಚೇರಿ ಮತ್ತು ಮನೆಗಳ ಮೇಲೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದೆ.

ಹನುಮಂತಪ್ಪ ಅವರ ವಿಜಯನಗರ ಜಿಲ್ಲೆಯ ಹೊಸಪೇಟೆಯ ನೆಹರು ಕಾಲೋನಿಯ ನಿವಾಸ ಹಾಗೂ ಬಳ್ಳಾರಿ ಜಿಲ್ಲೆಯ ಕುಡುತಿನಿಯ ನಿವಾಸ ಮತ್ತು ಕಚೇರಿ ಮೇಲೆ ಕೇಂದ್ರ ಅದಾಯ ತೆರಿಗೆ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ದಾಳಿ ನಡೆಸಿದೆ. ದಾಳಿ ವೇಳೆ ಅಧಿಕಾರಿಗಳು ಮಹತ್ತರ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡು ತನಿಖೆ ಮುದುವರಿಸಿದೆ.

ಓದಿ: ಬೆಂಗಳೂರಲ್ಲಿ ಡ್ರಗ್ಸ್ ಪಾರ್ಟಿ ಮೇಲೆ ದಾಳಿ: ಬಾಲಿವುಡ್‌ ಖ್ಯಾತ ನಟಿಯ ಸಹೋದರ ಡ್ರಗ್ಸ್ ಸೇವನೆ ದೃಢ!

ಕುಡುತಿನಿ ನಿವಾಸಿ ಹನುಮಂತಪ್ಪ ಗುತ್ತಿಗೆದಾರರಾಗಿದ್ದು, ಸದ್ಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಪೈಪ್ ಲೈನ್ ಅಳವಡಿಸುವ ಕೋಟ್ಯಂತರ ರೂ. ಮೌಲ್ಯದ ಕಾಮಗಾರಿ ಕೈಗೊಂಡಿದ್ದಾರೆ. ಇದಲ್ಲದೇ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಸರ್ಕಾರಿ ಯೋಜನೆಗಳ ಗುತ್ತಿಗೆಯನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಮಗಾರಿ ವೇಳೆ ದೊಡ್ಡ ಮೊತ್ತದ ತೆರಿಗೆ ವಂಚನೆ ಮಾಡಲಾಗಿದೆ ಎಂಬ ಮಾಹಿತಿ ಹಿನ್ನೆಲೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹನುಮಂತಪ್ಪ ಅವರು ಮೂಲತಃ ಕುಡುತಿನಿ ನಿವಾಸಿಯಾಗಿದ್ದು, ಕಲ್ಯಾಣಮಂಟಪ ಸೇರಿದಂತೆ ಇತರ ವಹಿವಾಟುಗಳನ್ನು ನಡೆಸುತ್ತಿರುವುದು ಅಧಿಕಾರಿಗಳ ತನಿಖೆ ವೇಳೆ ಬಯಲಿಗೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.