ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 17 ವರ್ಷದ ಕಾರ್ತಿಕ್ ಹಾಗೂ 22 ವರ್ಷದ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ.
ಕಾಣೆಯಾದ ಯುವಕನ ಚಹರೆ ಗುರುತು: ಚಲವಾದಿ ಜನಾಂಗದ ಈ ಯುವಕ ಅಂದಾಜು 4-8 ಅಡಿ ಎತ್ತರ, 3ನೇ ತರಗತಿ ವಿದ್ಯಾಭ್ಯಾಸ, ಕೋಲುಮುಖ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ, ಬಲಭುಜದ ತೋಳಿನ ಮೇಲೆ ಆಂಜನೇಯ ಮೂರ್ತಿ ಹಚ್ಚೆ ಗುರುತು ಇರುತ್ತದೆ. ಕೇಸರಿ ಬಣ್ಣದ ಗೆರೆವುಳ್ಳ ತುಂಬು ತೋಳುವುಳ್ಳ ಅಂಗಿ ಮತ್ತು ನಸಿ ಬಣ್ಣದ ಪ್ಯಾಂಟ್ ಧರಿಸುತ್ತಾರೆ, ಕನ್ನಡ ಭಾಷೆ ಮಾತನಾಡುತ್ತಾರೆ.
ಯುವತಿ ನಾಪತ್ತೆ: ಹೊಸಪೇಟೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 22 ವರ್ಷದ ಶಶಿರೇಖಾ ಎಂಬ ಯುವತಿ ಕಾಣೆಯಾಗಿದ್ದಾಳೆ.
ಕಾಣೆಯಾದ ಯುವತಿಯ ಚಹರೆ ಗುರುತು: ಆರ್ಯವೈಶ್ಯ ಜನಾಂಗದ ಈ ಯುವತಿಯು 4-8 ಅಡಿ ಎತ್ತರ, ಬಿಕಾಂ ವಿದ್ಯಾಭ್ಯಾಸ, ಕೋಲು ಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕುತ್ತಿಗೆಯ ಕೆಳಗೆ ಕಪ್ಪು ಮಚ್ಚೆ ಮತ್ತು ಮೂಗಿನ ತುದಿಗೆ ಒಂದು ಕಪ್ಪು ಮಚ್ಚೆ ಗುರುತು ಇರುತ್ತದೆ. ಗುಲಾಬಿ ಬಣ್ಣದ ಚೂಡಿದಾರ ಧರಿಸುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಮೇಲ್ಕಂಡ ಯುವತಿ- ಯುವಕನ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ: 08394-224033, ಪಿ.ಎಸ್.ಐ.ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ: 94808-03089, ಪಿ.ಐ.ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ: 94808-03070, ಡಿ.ಎಸ್.ಪಿ.ಹೊಸಪೇಟೆ : 08394-224204, ಎಸ್.ಪಿ. ಬಳ್ಳಾರಿ: 08392-258400 ಗೆ ಸಂಪರ್ಕಿಸಲು ತಿಳಿಸಿದ್ದಾರೆ.