ETV Bharat / city

ಕೋವಿಡ್ ಸೋಂಕಿತರಿಗೆ ಬೆಡ್ ನೀಡದ ಆರೋಪ.. 19 ಖಾಸಗಿ ಆಸ್ಪತ್ರೆಗಳ‌ ಪರವಾನಗಿ ರದ್ದುಗೊಳಿಸಿದ ಬಿಬಿಎಂಪಿ

author img

By

Published : Aug 1, 2020, 2:47 PM IST

ಐಎಎಸ್ ಅಧಿಕಾರಿ ಹರ್ಷಗುಪ್ತಾ ಹಾಗೂ ಎಡಿಜಿಪಿ ರೂಪಾ ಅವರ ನೇತೃತ್ವದ ತಂಡವು ನಿನ್ನೆ ಸೋಂಕಿತರಿಗೆ ಬೆಡ್​​ಗಳಿದ್ದರೂ ಇಲ್ಲವೆಂದು ಸುಳ್ಳು ಹೇಳಿರುವ ಕುರಿತು ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಮೊದಲ ಹಂತದಲ್ಲಿ ಪರವಾನಗಿ ರದ್ದುಪಡಿಸಲಾಗಿದೆ..

Health Minister B. Sriramulu
ಆರೋಗ್ಯ ಸಚಿವ ಬಿ.ಶ್ರೀರಾಮುಲು

ಬಳ್ಳಾರಿ : ಕೋವಿಡ್​​-19 ಸೋಂಕಿತರ ಚಿಕಿತ್ಸೆಗೆ ಬೆಡ್​​​ ನೀಡದೆ ವಾಪಸ್​​ ಕಳುಹಿಸಿದ ಆರೋಪದಡಿ ಬೆಂಗಳೂರಿನಲ್ಲಿ 19 ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ರದ್ದುಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾಹಿತಿ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿತರಿಗೆ ಅಂದಾಜು 50 ಬೆಡ್​​​ಗಳನ್ನು ಮೀಸಲಿರಿಸಬೇಕು ಎಂದು ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ, 19 ಆಸ್ಪತ್ರೆಗಳು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿವೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​​ಗಳ ಲಭ್ಯತೆ ಇದ್ದರೂ ಇಲ್ಲವೆಂದು ಸೋಂಕಿತರನ್ನು ವಾಪಸ್​​ ಕಳುಹಿಸಲಾಗುತ್ತಿದೆ. ಸೋಂಕಿತರನ್ನು ಅನಗತ್ಯ ನಿಂದಿಸುವುದಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಮನಸೋ ಇಚ್ಛೆ ಟೀಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ, ಬಿಬಿಎಂಪಿ ಆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಿದೆ ಎಂದು ತಿಳಿಸಿದರು.

ಆರೋಗ್ಯ ಸಚಿವ ಬಿ.ಶ್ರೀರಾಮುಲು

ಐಎಎಸ್ ಅಧಿಕಾರಿ ಹರ್ಷಗುಪ್ತಾ ಹಾಗೂ ಎಡಿಜಿಪಿ ರೂಪಾ ಅವರ ನೇತೃತ್ವದ ತಂಡವು ನಿನ್ನೆ ಸೋಂಕಿತರಿಗೆ ಬೆಡ್​​ಗಳಿದ್ದರೂ ಇಲ್ಲವೆಂದು ಸುಳ್ಳು ಹೇಳಿರುವ ಕುರಿತು ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಮೊದಲ ಹಂತದಲ್ಲಿ ಪರವಾನಗಿ ರದ್ದುಪಡಿಸಲಾಗಿದೆ. ಮುಂದೆ ಆಸ್ಪತ್ರೆಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ ಸಚಿವ ಶ್ರೀರಾಮುಲು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.