ETV Bharat / city

ನಿರ್ವಹಣೆ ಇಲ್ಲದೇ ಸೊರಗಿದ 'ಆದರ್ಶ' ವಿದ್ಯಾಲಯ.. ವಿದ್ಯಾರ್ಥಿಗಳ ಗೋಳು ಕೇಳುವವರ್ಯಾರು.. - ಹೊಸಪೇಟೆ ಆದರ್ಶ ಶಾಲೆ ಸಮಸ್ಯೆ

ಆದರ್ಶ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೂ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಈ ತರಗತಿಗಳಲ್ಲಿ 397 ವಿದ್ಯಾರ್ಥಿಗಳು ವಿದ್ಯಾಭಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕಿ ಸೇರಿ ಒಟ್ಟು 13 ಜನ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ..

adarsha-school-spoiled-without-proper-maintenance
ಆದರ್ಶ ವಿದ್ಯಾಲಯ
author img

By

Published : Jan 8, 2021, 7:42 PM IST

ಹೊಸಪೇಟೆ : ರಾಜ್ಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ನಗರದ ಜಂಬುನಾಥ ರಸ್ತೆಯ ಸ್ವಚ್ಛಂದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಆದರ್ಶ ಶಾಲೆ, ಸರಿಯಾದ ನಿರ್ವಹಣೆ ಇಲ್ಲದೇ ಕಳೆ ಗುಂದಿದೆ. ಇದರ ನಡುವೆಯೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಬಂದೊದಗಿದೆ.

ಸಮಸ್ಯೆ ತಾಣ : ಶಾಲೆಯಲ್ಲಿ ಗ್ರೌಡ್ ಪ್ಲೋರ್ 12 ಕೊಠಡಿಗಳಿವೆ ಹಾಗೂ ನಾಲ್ಕು ಶೌಚ ಗೃಹಗಳಿವೆ. ಅವುಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಫಸ್ಟ್‌ಪ್ಲೋರ್ ಹಾಗೂ ಸೆಕೆಂಡ್ ಪ್ಲೋರ್ ಕೊಠಡಿ ಗ್ಲಾಸ್​ಗಳು ಒಡೆದಿವೆ, ಶೌಚಾಲಯ ನಿರ್ವಹಣೆ ಇಲ್ಲ. ಇದರಿಂದ ಶೌಚಾಲಯಗಳು ಗಬ್ಬು ನಾರುತ್ತಿವೆ. ಅಲ್ಲದೇ, ಶಾಲೆಯ ಆಟದ ಮೈದಾನಕ್ಕೆ ಪಾರ್ಥೇನಿಯಂ ಗಿಡ ಆಕ್ರಮಿಸಿಕೊಂಡಿವೆ.‌

ನಿರ್ವಹಣೆ ಇಲ್ಲದೇ ಸೊರಗಿದ 'ಆದರ್ಶ' ವಿದ್ಯಾಲಯ..

ಸಾರಿಗೆ ಸೌಲಭ್ಯ ಕೊರತೆ : ವಿದ್ಯಾಲಯಕ್ಕೆ ಕಂಪ್ಲಿ, ಗಾದಿಗನೂರು, ಮರಿಯಮ್ಮನಹಳ್ಳಿ, ಮಲಪಣಗುಡಿ, ಕಮಲಾಪುರ, ವಡ್ಡರಹಳ್ಳಿ, ಪಿಕೆ ಹಳ್ಳಿ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ, ಅವರಿಗೆ ಯಾವುದೇ ಸರ್ಕಾರಿ ಬಸ್ ಸೌಲಭ್ಯವಿಲ್ಲ.

ಖಾಸಗಿ ವಾಹನಗಳನ್ನು ನೆಚ್ಚಿ ಶಾಲೆಗೆ ಬರವಂತಹ ಸ್ಥಿತಿ ಉದ್ಭವವಾಗಿದೆ. ಅಲ್ಲದೆ, ಬಸ್ ಸೌಲಭ್ಯವನ್ನು ಒದಗಿಸುವಂತೆ ಸಾರಿಗೆ ಸಂಸ್ಥೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಆದರ್ಶ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೂ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಈ ತರಗತಿಗಳಲ್ಲಿ 397 ವಿದ್ಯಾರ್ಥಿಗಳು ವಿದ್ಯಾಭಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕಿ ಸೇರಿ ಒಟ್ಟು 13 ಜನ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತ್​ದೊಂದಿಗೆ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕಿ ಸುಲೋಚನಾ ಬಾಯಿ ಅವರು ಮಾತನಾಡಿ, ಕೊರೊನಾದಿಂದ 10 ತಿಂಗಳ ಕಾಲ ಶಾಲೆ ತೆರೆದಿಲ್ಲ. ಹಾಗಾಗಿ ಕಸ ಕಡ್ಡಿಗಳು ತುಂಬಿದೆ. ಈಗಾಗಲೇ ಸ್ಬಚ್ಛತೆ ಮಾಡಲಾಗುತ್ತಿದೆ.

ಬಿಇಒ ಅವರು ಸಹ ಭೇಟಿ ನೀಡಿ, ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದ್ದಾರೆ. ಕೊಠಡಿ ಗ್ಲಾಸ್ ಒಡೆಯದಂತೆ ಎಸ್​​ಡಿಎಂಸಿ ಸದಸ್ಯರ ಜತೆ ಚರ್ಚಿಸಲಾಗುವುದು. ಆಟದ ಮೈದಾನವನ್ನು ಸ್ವಚ್ಛ ಮಾಡಿ ಕೊಡಲು ನಗರಸಭೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.