ಚಿಕ್ಕೋಡಿ : ಕಡಿ ಕಲ್ಲು ತುಂಬಿಕೊಂಡು ಹೋರಟ್ಟಿದ್ದ ಲಾರಿಯ ಚಕ್ರಕ್ಕೆ ಯುವಕನೊರ್ವ ಸಿಲುಕಿ ಸಾವನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದಿದೆ.
ಕೇರೂರ ಗ್ರಾಮದ ಪರಶುರಾಮ ಶ್ರೀಕಾಂತ ನಾವಿ (27) ಮೃತ ದುರ್ದೈವಿ ಯುವಕ. ಕೇರೂರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಅಂಕಲಿ ಇಂದ ಕೇರೂರಿನತ್ತ ಕಡಿಕಲ್ಲು ಹೊತ್ತು ಹೊರಟಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಪರಶುರಾಮ ಸಾವನಪ್ಪಿದ್ದಾನೆ.
ಸ್ಥಳಕ್ಕೆ ಅಂಕಲಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.