ETV Bharat / city

ಬೆಟ್‌ ಕಟ್ಟಿ ಬೆತ್ತಲೆಯಾಗೇ ಯುವತಿಯ ಬೈಕ್‌ ರೈಡ್‌! ಗಸ್ತು ತೀವ್ರಗೊಳಿಸಲು ಬೆಳಗಾವಿಗರ ಆಗ್ರಹ - belgavi latest news

ಬೆಳಗಾವಿ ಜಿಲ್ಲೆಯಲ್ಲಿ ನಗ್ನವಾಗಿ ನಗರ ಸುತ್ತಿದ್ದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಮಾದಕ ಸೇವಿಸಿ ಬೆಟ್ಟಿಂಗ್​ಗಾಗಿ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಗ್ನವಾಗಿ ಬೈಕ್​ ಹಿಂಬದಿ ಕುಳಿತಿರುವುದು
author img

By

Published : Aug 17, 2019, 4:58 PM IST

Updated : Aug 17, 2019, 9:47 PM IST

ಬೆಳಗಾವಿ: ನಗರದಲ್ಲಿ ಯುವತಿಯೊಬ್ಬಳು ರಾತ್ರಿ ಬೆತ್ತಲೆ ಬೈಕ್ ರೈಡ್ ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಇದು ಕಳೆದ ಎರಡು ದಿನಗಳ ಹಿಂದೆ ರಾತ್ರಿ‌ ಎಂಟು ಗಂಟೆ ಸುಮಾರಿಗೆ ನಡೆದ ಘಟನೆ. ಇದನ್ನು ನೋಡಿರುವ ಬೆಳಗಾವಿಯ ಕೆಲ ಜನರು, ಎಂಥಾ ಕಾಲ ಬಂತು ಅಂತಾ ಮಾತಾಡಿಕೊಂಡಿದ್ದಾರೆ. ಸ್ಕೂಟಿಯ ಹಿಂಬದಿಯಲ್ಲಿ ಬೆತ್ತಲಾಗಿ ಕುಳಿತಿದ್ದ ಯುವತಿ ಬೈಕ್ ಚಲಾಯಿಸುತ್ತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ರೈಡ್ ಮಾಡಿಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗ್ನವಾಗಿ ಬೈಕ್​ ಹಿಂಬದಿ ಕುಳಿತಿರುವುದು

ಯುವಕನೊಂದಿಗೆ ಸ್ಕೂಟಿ ಮೇಲೆ ಬೆತ್ತಲೆಯಾಗಿ ಹಿಂದೆ ಕುಳಿತಿದ್ದ ಯುವತಿ ಚೆನ್ನಮ್ಮ ಮಾರ್ಗವಾಗಿ, ‌ಕ್ಲಬ್ ರೋಡ್‌ಗೆ ಬಂದ ಬಳಿಕ ಒಬ್ಬಳೇ ರೈಡ್ ಮಾಡಿಕೊಂಡು ಹಿಂಡಲಗಾ ರಸ್ತೆಯಲ್ಲಿ ತೆರಳಿದ್ದಾಳೆ. ಡ್ರಗ್ ಅಮಲಿನಲ್ಲಿ ಬೆಟ್ಟಿಂಗ್ ಕಟ್ಟಿ ಯುವತಿ ಮತ್ತು ಗೆಳೆಯರ ಗುಂಪೊಂದು ಈ ರೀತಿ ವರ್ತಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಎಪಿಎಂಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತಂತೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

ಈ ಘಟನೆಯನ್ನು ಕಣ್ಣಾರೆ ಕಂಡಿರುವ ಕನ್ನಡ ಪರ ಹೋರಾಟಗಾರರಾದ ಅಶೋಕ ಚಂದರಗಿ ಪ್ರತಿಕ್ರಿಯಿಸಿದ್ದಾರೆ. ಬೇರೆ ರಾಜ್ಯಗಳಿಂದ ಬಂದಿರುವ ಕೆಲವು ವಿದ್ಯಾರ್ಥಿ ಗಳು ಇಂತಹ ಬೆಟ್ಟಿಂಗ್ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಪೊಲೀಸರು ಗಸ್ತನ್ನು ಬಿಗಿಗೊಳಿಸಿ ಇಂತಹ ಘಟನೆಗಳನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

Intro:Body:

1 bgm imp.txt   

close

Conclusion:
Last Updated : Aug 17, 2019, 9:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.