ಬೆಳಗಾವಿ: ಬಹಿರ್ದೆಸೆಗೆ ತೆರಳಿದಾಗ ಕಾಲು ಜಾರಿ ಕೆರೆಗೆ ಬಿದ್ದ ಬಾಲಕನ ರಕ್ಷಣೆಗೆ ಧಾವಿಸಿದ್ದ ವ್ಯಕ್ತಿ ನೀರುಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ನೀರುಪಾಲಾಗಿದ್ದ ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಬಾಲಕನ ರಕ್ಷಣೆಗೆ ಧಾವಿಸಿದ್ದ ಕಾಂತೇಶ್ ಬಡಿಗೇರ (25) ಎಂಬವರ ಶವ ಪತ್ತೆಯಾಗಿದೆ. ಕಾಂತೇಶ್ ಬಡಿಗೇರ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ಇವರು ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರಂತೆ. ಬಾಲಕ ಕೆರೆಗೆ ಬಿದ್ದಿದ್ದನ್ನು ಗಮನಿಸಿದ ಇವರು ರಕ್ಷಣೆಗೆ ಧಾವಿಸಿದ್ದರು ಎನ್ನಲಾಗ್ತಿದೆ.
ಸದ್ಯ ಕಾಂತೇಶ್ ಮೃತದೇಹ ದೊರೆತಿದ್ದು, ಬಾಲಕನ ಪತ್ತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಾರಾಮಾರಿ ತಡೆಯಲು ಹೋದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಆರೋಪ: ಮಂಗಳೂರಲ್ಲಿ 7 ಮಂದಿ ಬಂಧನ