ETV Bharat / city

ಬಿಸಿಲನ್ನೂ ಲೆಕ್ಕಿಸದೆ ಪಾದಯಾತ್ರೆಯಲ್ಲಿ ಭಾಗಿಯಾದ ಸಹಸ್ರಾರು ಭಕ್ತರು

author img

By

Published : Jan 22, 2020, 8:50 AM IST

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ನಡೆಯುತ್ತಿರುವ ಯಲ್ಲಾಲಿಂಗ ಮಹರಾಜರ 34ನೇ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವದ ಹಿನ್ನೆಲೆ 20ಕ್ಕೂ ಹೆಚ್ಚು ಕಿ.ಮೀ. ದೂರ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಪಾದಯಾತ್ರೆ ಮಾಡಿದರು.

Yallalinga Maharaja Fest
ಪಾದಯಾತ್ರೆಯಲ್ಲಿ ಭಾಗಿಯಾದ ಸಹಸ್ರಾರು ಭಕ್ತರು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ನಡೆಯುತ್ತಿರುವ ಯಲ್ಲಾಲಿಂಗ ಮಹರಾಜರ 34ನೇ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವದ ಹಿನ್ನೆಲೆ 20ಕ್ಕೂ ಹೆಚ್ಚು ಕಿ.ಮೀ. ದೂರ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಪಾದಯಾತ್ರೆ ಮಾಡಿದರು.

ಯಲ್ಲಾಲಿಂಗ ಮಹರಾಜರ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವ

ಮುಗಳಖೋಡ ಮಠಕ್ಕೆ ಸರ್ವ ಧರ್ಮೀಯರು ಮೊರೆ ಹೋಗುವುದು ವಿಶೇಷ. ಅದರಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪಾದಯಾತ್ರೆ ಮೂಲಕ ಕೋಳಿಗುಡ್ಡ ಶ್ರೀಮಠದಿಂದ ಮುಕ್ತಿ ಮಂದಿರ ಮುಗಳಖೋಡದವರೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವದ ಭವ್ಯ ಮೆರವಣಿಗೆಯನ್ನು ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಕುಡಚಿ ಶಾಸಕ ಪಿ.ರಾಜೀವ್​ ಕೂಡಾ ಕಳೆದ 11 ವರ್ಷದಿಂದ ಪಾದಯಾತ್ರೆಯ ಮೂಲಕ ಅಜ್ಜನವರ ದರ್ಶನ ಪಡೆಯಲು ಬರುತ್ತಿದ್ದಾರಂತೆ.

ಪಾದಯಾತ್ರೆಗೆ ಪಾಲಭಾವಿ, ಹಿಡಕಲ, ಸಿದ್ದಾಪೂರ, ಹಾರೂಗೇರಿ ಹೀಗೆ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಜೊತೆಗೆ ಆಂಧ್ರ ಪ್ರದೇಶದ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಹೀಗೆ ಹಲವಾರು ರಾಜ್ಯಗಳ ಭಕ್ತರು ಯಲ್ಲಾಲಿಂಗ ಅಜ್ಜನವರ ಆಶೀರ್ವಾದ ಪಡೆಯಲು ಬರುವುದು ವಿಶೇಷ.

Intro:ಕಿಲೋ ಮೀಟರ ಗಟ್ಟಲೆ ನಡೆದ ಪಾದಯಾತ್ರೆಯಲ್ಲಿ ಭಾಗಿಯಾದ ಸಹಸ್ರಾರು ಭಕ್ತರು
Body:
ಚಿಕ್ಕೋಡಿ :
ಪ್ಯಾಕೇಜ್

ದೇವರ ನಾಮಸ್ಮರಣೆ ಮಾಡುತ್ತಾ ನಡೆಯುವುದೆಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ. ಸುಡು ಬಿಸಲನ್ನು ಲೆಕ್ಕಿಸದೇ ಪ್ರತಿ ವರ್ಷವೂ ಇಲ್ಲಿನ ಭಕ್ತರೂ ಇಪ್ಪತಕ್ಕೂ ಹೆಚ್ವು ಕಿ.ಮೀ ಮೂಲಕ ಸುಡು ಬಿಸಲಿನಲ್ಲಿ ದೇವರ ದರ್ಶನ ಪಡೆಯಲು ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ದೇವರ ದರ್ಶನ ಪಡೆಯುವುದು ವಿಶೇಷ ಇದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮಠದಲ್ಲಿ ನಡೆಯುತ್ತಿರುವ 34 ನೇ ಯಲ್ಲಾಲಿಂಗ ಮಹರಾಜರ ಪುಣ್ಯಸ್ಮರಣೋತ್ಸವ ಜಾತ್ರಾ ಮಹೋತ್ಸವದ ನಿಮಿತ್ಯ ಪಾದಯಾತ್ರೆ ಜರುಗಿತಿ ಮಠಕ್ಕೆ ಹಿಂದೂ, ಮುಸ್ಲಿಂ, ಜೈನ ಹೀಗೆ ಸರ್ವ ಧರ್ಮಿಯರು ಮಠದ ಮೊರೆ ಹೋಗುವುದು ವಿಶೇಷ. ಅದರಂತೆ ತಮ್ಮ ಇಷ್ಟಾರ್ಥ ಬೇಡಿಕೆಗಳು ಸಿದ್ದಿಯಾಗಿ ಪಾದ ಯಾತ್ರೆಗಳ ಮೂಲಕ ಕೋಳಿಗುಡ್ಡ ಶ್ರೀಮಠದಿಂದ ಮುಕ್ತಿ ಮಂದಿರ ಮುಗಳಖೋಡದವರೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವದೊಂದಿಗೆ ಭವ್ಯ ಮೆರವಣಿಗೆಯು ಕಳೆದ 20 ವರ್ಷಗಳಿಂದ ನಡೆದು ಬಂದ ದಾರಿ ಅದರಂತೆ ಕುಡಚಿ ಶಾಸಕರು ಸಹಿತ ಕಳೆದ 11 ವರ್ಷದಿಂದ ಕೋಳಿಗುಡ್ಡದಿಂದ ಪಾದಯಾತ್ರೆಯ ಮೂಲಕ ಅಜ್ಜನವರ ದರ್ಶನ ಪಡೆಯಲು ಬರುತ್ತಾರಂತೆ

ಬೈಟ್ 1 : ಪಿ.ರಾಜೀವ - ಕುಡಚಿ ಶಾಸಕ

ಈ ಒಂದು ಪಾದಯಾತ್ರೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲಭಾವಿ, ಹಿಡಕಲ, ಸಿದ್ದಾಪೂರ, ಹಾರೂಗೇರಿ ಹೀಗೆ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಪಾದಯಾತ್ರೆ ಮೂಲಕ ಸಾವಿರಾರು ಭಕ್ತರು ಬಂದರೆ ಪರ ರಾಜ್ಯದ ಆಂಧ್ರಪ್ರದೇಶದ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಹೀಗೆ ಹಲವಾರು ರಾಜ್ಯದ ಭಕ್ತರು ಯಲ್ಲಾಲಿಂಗ ಅಜ್ಜನವರ ಆಶೀರ್ವಾದ ಪಡೆಯಲು ಬರುವುದು ವಿಶೇಷ

ಮುಗಳಖೋಡ ಶಾಖಾ ಮಠ ಕೋಳಿಗುಡ್ಡದಿಂದ ಸಿದ್ದಲಿಂಗ ಮಹರಾಜರ ಪಲ್ಕಕ್ಕಿ ಉತ್ಸವವು ಪಾದಯಾತ್ರಯ ಮೂಲಕ ಮುಗಳಖೋಡ ಮಠಕ್ಕೆ ಭವ್ಯ ಮೆರವಣಿಗೆಯ ಮೂಲಕ ಬರುವುದು ಅದಕ್ಕೂ ಪೂರ್ವದಲ್ಲಿ ಮುರಘರಾಜೇಂದ್ರ ಸ್ವಾಮೀಜಿ ಅವರು ಸಿದ್ದಲಿಂಗ ಮಹರಾಜರ ಪಲ್ಲಕ್ಕಿಯನ್ನು ಪೂಜೆ ಮಾಡಿ ಅದನ್ನು ಮುಗಳಖೋಡದ ಯಲ್ಲಾಲಿಂಗ ಮಠದ ವರೆಗೆ ಹಲವಾರು ವಾದ್ಯಮೇಳದೊಂದಿಗೆ ಕರೆದುಕೊಂಡು ಬಂದು ಮಠದಲ್ಲಿ ಪೂಜೆ ಮಾಡಿ ಗದಗಿನಲ್ಲಿ ಯಲ್ಲಾಲಿಂಗ ಮಹರಾಜರ ಹಾಗೂ ಸಿದ್ದಲಿಂಗ ಮಹರಾಜರ ದರ್ಶನ ಮಾಡಲು ಭಕ್ತರಿಗೆ ಅನು ಮಾಡಿಕೊಡುವುದು ವಾಡಿಕೆ.

ಈ ಒಂದು ಮಠದಲ್ಲಿ ಸರ್ವಧರ್ಮದ ಭಕ್ತರು ಅಜ್ಜನವರ ಆಶೀರ್ವಾದ ಪಡೆಯಲು ಬರುವುದು ವಿಶೇಷ ಇದನ್ನ ಕೆಲವರು ಈ ರೀತಿ ಆಚರಣೆ ಮಾಡುವುದು ಮೂಢನಂಬಿಕೆ ಎನ್ನುತ್ತಾರೆ. ಆದರೆ, ಇದು ಮೂಲ ನಂಬಿಕೆಯಾಗಿದೆ ಎನ್ನುತ್ತಾರೆ ಇಲ್ಲಿನ ಪೀಠಾಧ್ಯಕ್ಷರು

ಬೈಟ್ 2 : ಡಾ.ಮುರಘರಾಜೇಂದ್ರ ಸ್ವಾಮೀಜಿ - ಮುಗಳಖೋಡ ಪೀಠಾಧ್ಯಕ್ಷ

ಒಟ್ಟಾರೆ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಯಲ್ಲಾಲಿಂಗ ಅಜ್ಜನವರ ದರ್ಶನ‌ ಪಡೆಯಲು ಹೊರ ರಾಜ್ಯಗಳಿಂದ ಭಕ್ತರು ಬರುವುದು ವಿಶೇಷವಾಗಿದ್ದು ಉ.ಕ ದಲ್ಲಿ ಮುಗಳಖೋಡ ಮಠವು ಒಂದು ದೊಡ್ಡ ಮಠವು ತನ್ನದೆಯಾದ ಪರಂಪರೆಯನ್ನು ಹೊಂದಿರುವುದು ವಿಶೇಷವಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.