ETV Bharat / city

ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಪೊಲೀಸರ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ

ಪೊಲೀಸರ ಮೇಲೆಯೇ ಕೆಲವೊಂದಷ್ಟು ದೂರುಗಳಿದ್ದು, ಇದನ್ನ ತಡೆಯಲು ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Araga Jnanendra
Araga Jnanendra
author img

By

Published : Sep 28, 2021, 12:06 PM IST

ಮೈಸೂರು: ರಾಜ್ಯದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಪೊಲೀಸರ ವಿರುದ್ಧ ಸಾರ್ವಜನಿಕರು ದೂರು ನೀಡುವ ವ್ಯವಸ್ಥೆಯನ್ನ ಶೀಘ್ರದಲ್ಲಿ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ರವಾನಿಸಿದ್ದಾರೆ.

ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರ ಮೇಲೆಯೇ ಕೆಲವೊಂದಷ್ಟು ದೂರುಗಳಿವೆ. ಇದನ್ನ ತಡೆಯುವುದು ಅನಿವಾರ್ಯವಾಗಿದೆ. ಪ್ರತಿ ಜಿಲ್ಲೆಯಲ್ಲೂ ಎರಡು ದೂರವಾಣಿ ಸಂಖ್ಯೆ ಸಮೇತ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದೇವೆ. ಬೆಂಗಳೂರಿಗೆ ಹೋದ ತಕ್ಷಣ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸುತ್ತೇನೆ. ಜನಸ್ನೇಹಿ ಪೊಲೀಸ್ ದೃಷ್ಟಿಯಿಂದ ಈ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದರು.

ಮಾಧ್ಯಮಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ

ಮಂಗಳೂರಿನಲ್ಲಿ ನಡೆದ ನೈತಿಕ ಗಿರಿ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇಂತಹ ಪ್ರಕರಣ ನಡೆಯದಂತೆ ಕ್ರಮ ವಹಿಸಲಾಗುವುದು. ನೈತಿಕ ಪೊಲೀಸ್ ಗಿರಿ ನಡೆಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Watch video: ಬೆಂಗಳೂರಲ್ಲಿ 3 ಅಂತಸ್ತಿನ ಮತ್ತೊಂದು ಕಟ್ಟಡ ಕುಸಿತ...

ಬೆಳಗಾವಿಯ ಕಬ್ಬಿನ ಗದ್ದೆಯಲ್ಲಿ 2 ವರ್ಷದ ಮಗು ಶವ ಪತ್ತೆ ವಿಚಾರವಾಗಿ ಮಾತನಾಡಿ, ಇದು ನನ್ನ ಗಮನದಲ್ಲಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಔರಾದ್ಕರ್ ವರದಿ ಸರಿಯಾಗಿ ಜಾರಿಯಾಗಿದೆ. ಆದರೆ, ಹಿರಿಯ ಅಧಿಕಾರಿ ಸಿಬ್ಬಂದಿಗೆ ಅನುಕೂಲವಾಗಿಲ್ಲ ಎನ್ನಲಾಗಿದೆ. ಅವರಿಗೆ ಎರಡರಿಂದ ಮೂರು ಹೆಚ್ಚುವರಿ ಭತ್ಯಗಳನ್ನು ನೀಡಲಾಗುತ್ತದೆ. ಆರ್ಥಿಕತೆ ಸ್ವಲ್ಪ ಬಿಟ್ಟು ಉಳಿದೆಲ್ಲ ಅನುಕೂಲಗಳು ಸಿಕ್ಕಿವೆ. ಎಫ್ ಎಸ್ಎಲ್ ಹೊಸದಾಗಿ ಸ್ಥಾಪನೆ ಮಾಡುವುದರಿಂದ 250 ಉದ್ಯೋಗಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.