ETV Bharat / city

ಕೊವಿಡ್-19 ತಡೆಗೆ ರುಬೊಲದ ಚುಚ್ಚುಮದ್ದು ಬಳಸಿ: ವೈದ್ಯ ರಮೇಶ್ ಗುಳ್ಳ ಸಲಹೆ - ಕೊವಿಡ್-19 ತಡೆಗೆ ರುಬೊಲದ ಚುಚ್ಚುಮದ್ದು ಬಳಸಿ

ಕೋವಿಡ್​​ ಮರಣಗಳು ಹೆಚ್ಚಾಗಿರುವ ಅನೇಕ ಮುಂದುವರಿದ ಅಮೆರಿಕ, ಯೂರೋಪ್ ದೇಶಗಳಲ್ಲಿ ಈ ಲಸಿಕೆ ಸಾರ್ವತ್ರಿಕವಾಗಿ ನೀಡಲಾಗುತ್ತಿಲ್ಲ ಎಂಬುದು ಕಂಡು ಬಂದಿದೆ. ಲಸಿಕೆ ನೀಡದ ಕಾರಣದಿಂದಲೇ ಹೆಚ್ಚು ಜನರು ಮೃತಪಡುತ್ತಿದ್ದಾರೆ ಎಂದು ವೈದ್ಯ ರಮೇಶ್​ ಗುಳ್ಳ ಆತಂಕ ವ್ಯಕ್ತಪಡಿಸಿದರು.

Ramesh Gulla is a doctor
ವೈದ್ಯ ರಮೇಶ್​ ಗುಳ್ಳ
author img

By

Published : May 22, 2020, 2:03 PM IST

ಅಥಣಿ: ಕೊರೊನಾ ವೈರಸ್​​​​ನಿಂದ ರಕ್ಷಿಸಿಕೊಳ್ಳಲು ರುಬೊಲ ಎಂಬ ಹಳೇ ರೋಗದ ಚುಚ್ಚುಮದ್ದು ಉಪಯೋಗವಾಗಲಿದೆ. ಹೀಗಾಗಿ, ಅದನ್ನು ಕೊರೊನಾ ವಾರಿಯರ್ಸ್ ಹಾಗೂ ಎಸ್​​​​ಎಸ್​ಎಲ್​ಸಿ ಮಕ್ಕಳಿಗೆ ತಕ್ಷಣ ನೀಡಬೇಕು ಎಂದು ಅಥಣಿ ಗುಳ್ಳ ಆಸ್ಪತ್ರೆಯ ವೈದ್ಯ ರಮೇಶ್ ಗುಳ್ಳ ಸರ್ಕಾರಕ್ಕೆ ಸಲಹೆ ನೀಡಿದರು.

ಈಟಿವಿ ಭಾರತ ಜೊತೆ ಮಾತನಾಡಿದ ಅವರು, ರುಬೊಲ ಎಂಬ ಹಳೇ ವೈರಾಣು ಶೇ.30ರಷ್ಟು ಕೊರೊನಾ ವೈರಸ್ ಹೋಲಿಕೆ ಇರುವುದು ಗೊತ್ತಾಗಿದೆ. ರುಬೊಲ ರೋಗ ತಡೆಗೆ ಲಭ್ಯವಿರುವ 'ಎಮ್​​ಆರ್​ ಅಥವಾ ಎಮ್​​​ಎಮ್​​ಆರ್' ಲಸಿಕೆಯನ್ನು ಹೊಸ ಬಳಕೆಯಾಗಿ ಕೋವಿಡ್​​​​ ರೋಗಿಗಳಿಗೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕೊರೊನಾ ವೈರಸ್​​ ರೋಗಿಗಳಿಗೆ ಈ ಲಸಿಕೆ ನೀಡಿದರೆ, ಸಾವನ್ನಪ್ಪುವ ಪ್ರಮಾಣ ನಿಸ್ಸಂದೇಹವಾಗಿ ಕಡಿಮೆಯಾಗುತ್ತದೆ. ಇದಕ್ಕೆ ಸಾಕಷ್ಟು ಪುರಾವೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಈ ಲಸಿಕೆ ನೀಡುವ ಮಡಗಾ‌ಸ್ಕರ್​ ಮತ್ತು ಹಾಂಗ್​​ಕಾಂಗ್ ದೇಶಗಳಲ್ಲಿ ಕೋವಿಡ್​​​ ಮರಣಗಳು ಇಲ್ಲವೇ ಇಲ್ಲ ಎಂದರು.

ವೈದ್ಯ ರಮೇಶ್ ಗುಳ್ಳ

ಎರಡೂವರೆ ಕೋಟಿಗಿಂತ ಹೆಚ್ಚು ಜನರಿರುವ ಮಡಗಾಸ್ಕರ್​ ದೇಶದಲ್ಲಿ ಈ ಲಸಿಕೆಯನ್ನು ಸಾರ್ವತ್ರಿಕವಾಗಿ ನೀಡಲಾಗುತ್ತಿದೆ. ಕಳೆದ ವರ್ಷ ಕಾರಣಾಂತರದಿಂದ ಕಾಲು ಭಾಗದ ಜನರಿಗೆ ಹೆಚ್ಚುವರಿಯಾಗಿ ಲಸಿಕೆಯನ್ನು ನೀಡಿತ್ತು. ಈಗ ಅಲ್ಲಿ ಒಂದು ಕೋವಿಡ್​​​ ಮರಣ ದಾಖಲಾಗಿಲ್ಲ. ಇದು ಆಶ್ಚರ್ಯಕರ ವಿಷಯವಾದರೂ ನಿಜ. ಅಲ್ಲಿ 4 ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದರು.

ಈ ಲಸಿಕೆಯಿಂದ ಅಡ್ಡ ಪರಿಣಾಮಗಳು ಸಂಭವಿಸುವುದಿಲ್ಲ. ಹೀಗಾಗಿ ಭಾರತ ಸರ್ಕಾರ ಅದರ ಬಳಕೆಗೆ ಅವಕಾಶ ನೀಡಬೇಕು. ಅಥಣಿ ತಹಶೀಲ್ದಾರ್​​​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಕೋವಿಡ್​​ನಿಂದ ರಕ್ಷಿಸಲು ಸ್ವತಃ ತಮ್ಮ ಕುಟುಂಬದವರು ಈ ಲಸಿಕೆ ತೆಗೆದುಕೊಂಡಿದ್ದೇವೆ. ಇದರಿಂದ ಅಡ್ಡಪರಿಣಾಮ ಇಲ್ಲ. ಆರೋಗ್ಯ ಇಲಾಖೆ ಇದನ್ನು ಆಯೋಜಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ನನ್ನ ಸಲಹೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.