ಬೆಳಗಾವಿ: ಆರನೇ ವೇತನ ಜಾರಿಗೆಗೆ ಆಗ್ರಹಿಸಿ ಅತ್ತ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೆ, ಇತ್ತ ಸಾರಿಗೆ ನೌಕರರ ಕುಟುಂಬಸ್ಥರು ಬಿಕ್ಷಾಟನೆ ಮಾಡಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು. ಈ ವೇಳೆ ಮಾರ್ಕೆಟ್ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದರು.
ಚಾಲಕನ ಕೊರಳಿಗೆ ಮಂಗಳಸೂತ್ರ ಹಾಕಿ ಆಕ್ರೋಶ: ಪೊಲೀಸರು ಮೂವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಸಮಾಧಾನಗೊಂಡ ನೌಕರರ ಕುಟುಂಬಸ್ಥರು, ಬಸ್ ತಡೆದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಮಹಿಳೆಯೊಬ್ಬರು ಬಸ್ ಏರಿ ತನ್ನ ಕೊರಳಲ್ಲಿದ್ದ ಮಂಗಳಸೂತ್ರವನ್ನು ಚಾಲಕನ ಕೊರಳಿಗೆ ಹಾಕಲು ಮುಂದಾದರು. ವೇತನ ಹೆಚ್ಚಳಕ್ಕೆ ಎಲ್ಲ ನೌಕರರು ಪ್ರತಿಭಟನೆ ನಡೆಸುತ್ತಿದ್ದರೆ, ನೀವೇಕೆ ಕರ್ತವ್ಯಕ್ಕೆ ಹಾಜರಾಗಿದ್ದೀರಿ. ಮನೆಯಲ್ಲಿ ಹೆಂಡತಿ - ಮಕ್ಕಳಿಲ್ವಾ ಎಂದು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಕರ್ತವ್ಯ ನಿರತ ಚಾಲಕನನ್ನು ಅವಾಚ್ಚ ಶಬ್ದಗಳಿಂದ ಮಹಿಳೆಯರು ನಿಂದಿಸಿದರು.
ಹೂಮಾಲೆ ಹಾಕಿ ಆಕ್ರೋಶ: ಮತ್ತೆ ಕೆಲ ಮಹಿಳೆಯರು ನಿಲ್ದಾಣಕ್ಕೆ ಆಗಮಿಸುತ್ತಿದ್ದ ಬಸ್ ಏರಿ, ಚಾಲಕನಿಗೆ ಹೂಮಾಲೆ ಹಾಕಿದರು. ಬಸ್ ಏಕೆ ಓಡಿಸ್ತಿದ್ದೀರಾ? ಮುಷ್ಕರದಲ್ಲಿ ಭಾಗಿಯಾಗಿ ಎಂದು ಒತ್ತಾಯಿಸಿದರು.
ಓದಿ: ಕರುವಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ದುರಂತ: ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯ!