ಬೆಳಗಾವಿ: ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮ ಪಂಚಾಯತಿ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು ಬೈಲಹೊಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಗಡಿ ಗ್ರಾಮದ ನಿಂಗವ್ವ ನಿಲಗುಂದ ಹಾಗೂ ಅರ್ಜುನಪ್ಪ ನಿಲಗುಂದ ಬಂಧಿತರು. ಆಸ್ತಿ ವಿವಾದ ಸಂಬಂಧ ಈ ಇಬ್ಬರು ತಿಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುಕ್ತುಂ ಹುಸೇನ್ ಎನ್ನುವವರನ್ನು ಕೊಡ್ಲಿಯಿಂದ ಕೊಚ್ಚಿ ಕೊಲೆ ಗೈದಿದ್ದರು. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಹಾಗೂ ಆರೋಪಿಗಳ ಜಮೀನು ಅಕ್ಕಪಕ್ಕದಲ್ಲಿದ್ದು, ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಹುಲ್ಲು ಕಟಾವು ವಿಚಾರವಾಗಿ ಮುಕ್ತುಂಹುಸೇನ್ ಹಾಗೂ ನಿಲಗುಂದ ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಗ್ರಾ.ಪಂ ಅಧ್ಯಕ್ಷನ ಕೊಲೆಯಲ್ಲಿ ಅಂತ್ಯಗೊಂಡಿದೆ.