ETV Bharat / city

ಮೂವರ ಹೆಂಡ್ತೀರ ಮುದ್ದಿನ ಗಂಡನ ಭೀಕರ ಹತ್ಯೆ..16 ಬಾರಿ ಇರಿದು ಕೊಲೆ ಮಾಡಿ ಪರಾರಿಯಾದ​ ಆ ನಾಲ್ವರ‍್ಯಾರು? - ಬೆಳಗಾವಿಯಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಬರ್ಬರ ಹತ್ಯೆ

ಆತ ಒಂದಲ್ಲಾ ಎರಡಲ್ಲಾ ಮೂರು ಜನರನ್ನ ಮದುವೆಯಾಗಿದ್ದ.. ಹಾಗಂತಾ ಯಾರಿಗೂ ಮೋಸ ಮಾಡಿರಲಿಲ್ಲ.. ಎಲ್ಲರಿಗೂ ಮದುವೆ ಆಗಿರುವ ವಿಚಾರ ಗೊತ್ತಿತ್ತು.. ಸಂಸಾರವೂ ಚೆನ್ನಾಗಿ ನಡೆಯುತ್ತಿತ್ತು. ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದ ಇವರು ಊರ ತುಂಬೆಲ್ಲ ಸಾಲ ಮಾಡಿಕೊಂಡಿದ್ದರು.. ಬೆಳಗ್ಗೆ ವಾಕಿಂಗ್ ಅಂತಾ ಕಾರಿನಲ್ಲಿ ಹೊರ ಹೋದವನ ಕಣ್ಣಿಗೆ ಕಾರದ ಪುಡಿ ಎರಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಷ್ಟಕ್ಕೂ ಈ ಉದ್ಯಮಿಯನ್ನು ಹತ್ಯೆ ಮಾಡಿದ್ಯಾರು? ಹದಿನಾರು ಬಾರಿ ಇರಿದು ಆತನನ್ನ ಕೊಂದಿದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ.

16 ಬಾರಿ ಇರಿದು ಕೊಲೆ ಮಾಡಿ ಪರಾರಿಯಾದ​ ಆ ನಾಲ್ವರ‍್ಯಾರು?

author img

By

Published : Mar 16, 2022, 9:11 AM IST

Updated : Mar 16, 2022, 5:49 PM IST

ಬೆಳಗಾವಿ: ವಾಕಿಂಗ್​ ಹೋದ ವ್ಯಕ್ತಿಯ ಮೇಲೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಹದಿನಾರು ಬಾರಿ ಇರಿದು, ಬರ್ಬರವಾಗಿ ಹತ್ಯೆ ಮಾಡಿ ಕಾಲ್ಕಿತ್ತಿದ್ದಾರೆ. ಕೊಲೆಯಾದ ವ್ಯಕ್ತಿಯ ಹೆಸರು ರಾಜು ಮಲ್ಲಪ್ಪ ದೊಡ್ಡಬಣ್ಣವರ್ ಎಂದು ತಿಳಿದು ಬಂದಿದೆ.

46 ವರ್ಷದ ರಾಜು ಮೂರು ಜನರನ್ನ ಮದುವೆಯಾಗಿದ್ದ. ಹಾಗಂತ ಯಾರಿಗೂ ವಿಚ್ಛೇದನ ಕೂಡ ನೀಡಿಲ್ಲ. ಮದುವೆಯಾದ ವಿಚಾರ ಎಲ್ಲರಿಗೂ ತಿಳಿದಿತ್ತು. ರಾಜು ಮಂಗಳವಾರ ಭವಾನಿ ನಗರದ‌ ಮನೆಯಿಂದ ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ವಾಕಿಂಗ್‌ಗೆ ತೆರಳಿದ್ದಾರೆ. ಈ ವೇಳೆ, ಎರಡನೇ ಹೆಂಡತಿಗೆ ಫೋನ್ ಕರೆ ಮಾಡಿದ್ದಾರೆ. ಆದರೆ, ಫೋನ್​​ ತಗೆದಿಲ್ಲ ಅನ್ನೋ ಕಾರಣಕ್ಕೆ ಒಬ್ಬರೇ ವಾಕ್ ಮಾಡಲು ಹೊರಟ್ಟಿದ್ದಾರೆ.

ಮನೆಯಿಂದ ಒಂದು ಕಿಮೀ ಹೋಗುವಷ್ಟರಲ್ಲಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ರಾಜು ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಆತ ಕಾರು ಇಳಿಯುತ್ತಿದ್ದಂತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ, ದುಷ್ಕರ್ಮಿಗಳು ರಾಜುವಿಗೆ ಹದಿನಾರು ಬಾರಿ ಇರಿದು ಪರಾರಿ ಆಗಿದ್ದಾರೆ. ತೀವ್ರ ಗಾಯಗೊಂಡಿದ್ದ ರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಓದಿ: ಉಕ್ರೇನ್‌ ಮೇಲೆ ಮತ್ತಷ್ಟು ದಾಳಿ: ಮರಿಯುಪೋಲ್‌ನಲ್ಲಿ ದೊಡ್ಡ ಆಸ್ಪತ್ರೆ ವಶಕ್ಕೆ ಪಡೆದ ರಷ್ಯಾ ಸೇನೆ

ವಾಕಿಂಗ್ ಮಾಡುತ್ತಿದ್ದ ಕೆಲವರು ರಸ್ತೆಯಲ್ಲಿ ಶವ ಬಿದ್ದಿದ್ದನ್ನು ಗಮನಿಸಿ ಬೆಳಗಾವಿ ಗ್ರಾಮೀಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಇತ್ತ ಡಿಸಿಪಿ ರವೀಂದ್ರ ಗಡಾದಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಶವವನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಮೂವರ ಹೆಂಡ್ತೀರ ಮುದ್ದಿನ ಗಂಡನ ಭೀಕರ ಹತ್ಯೆ

ಮೂವರನ್ನ ಮದುವೆಯಾಗಿದ್ದ ಉದ್ಯಮಿ: ರಾಜು 22ವರ್ಷದ ಹಿಂದೆ ಉಮಾ ಎಂಬುವರನ್ನು ಮದುವೆಯಾಗಿದ್ದ. ಎರಡು ಮಕ್ಕಳಿದ್ದು, ಇಬ್ಬರಿಗೂ ವೈದ್ಯಕೀಯ ಶಿಕ್ಷಣ ಓದಿಸುತ್ತಿದ್ದಾರೆ. ಆದರೆ, ನಾಲ್ಕು ವರ್ಷದ ಹಿಂದೆ ಮೊದಲ ಹೆಂಡತಿ ತನ್ನ ಮಕ್ಕಳನ್ನ ಇವರ ಬಳಿ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದರು. ಇತ್ತ ಎಂಟು ವರ್ಷದ ಹಿಂದೆ ಮಹಾರಾಷ್ಟ್ರದ ಲಾತೂರ್​ನ ಕಿರಣಾ ಎಂಬುವಳನ್ನೂ ರಾಜು ಮದುವೆಯಾಗಿದ್ದ. ಅವರಿಗೂ ಎರಡು ಮಕ್ಕಳಿವೆ.

ಇದಾದ ಬಳಿಕ ಒಂದು ವರ್ಷದ ಹಿಂದೆ ಹಳಿಯಾಳ ತಾಲೂಕಿನ ದೀಪಾಳನ್ನ ಕಟ್ಟಿಕೊಂಡಿದ್ದರು. ಆಕೆಯೂ ಇದೀಗ ಮೂರು ತಿಂಗಳ ಗರ್ಭಿಣಿ. ಹೀಗೆ ಮೂರು ಹೆಂಡತಿಯರನ್ನು ಒಂದೊಂದು ಕಡೆ ಇಟ್ಟು ರಾಜನಂತೆ ಜೀವನ ಸಾಗಿಸುತ್ತಿದ್ದ ರಾಜು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ನಾಲ್ಕು ಅಪಾರ್ಟ್‌ಮೆಂಟ್ ಕೆಲಸ ಕೂಡ ಪ್ರಗತಿಯಲ್ಲಿದ್ವಂತೆ.

ಆದರೆ, ಎಲ್ಲರ ಬಳಿ ಹಣ ಪಡೆದು ಸಿಕ್ಕಂತೆ ಖರ್ಚು ಮಾಡಿದ್ದನಂತೆ ಈ ರಾಜು. ವ್ಯವಹಾರ ವಿಚಾರದ ಕುರಿತು ಕೆಲ ದಿನಗಳ ಹಿಂದೆ ನಾಲ್ಕು ಜನರು ಮನೆವರೆಗೂ ಹುಡುಕಿಕೊಂಡು ಬಂದಿದ್ದರಂತೆ. ಆಗ ಸೆಕ್ಯುರಿಟಿ ಗಾರ್ಡ್ ಬಿಟ್ಟಿರಲಿಲ್ಲ. ಈ ವಿಚಾರ ಗೊತ್ತಾಗಿ ರಾಜುನೇ ಅವರಿಗೆ ಭೇಟಿಯಾಗಿ ವ್ಯವಹಾರದ ಬಗ್ಗೆ ಮಾತನಾಡಿದ್ದ. ಇದಾದ ಬಳಿಕ ಮಂಗಳವಾರ ಬೆಳಗ್ಗೆ ರಾಜು ಹತ್ಯೆಯಾಗಿದೆ.

ಓದಿ: ರಾಜ್ಯವಾರು ಹವಾಮಾನ ಮುನ್ಸೂಚನೆ: ಮುಂದಿನ ದಿನಗಳಲ್ಲಿ ಮತ್ತಷ್ಟು ತಾಪಮಾನ ಹೆಚ್ಚಳ ಸಾಧ್ಯತೆ

ಸದ್ಯ ಎರಡು ಆಯಾಮದಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮೂರು ಜನ ಹೆಂಡತಿಯರನ್ನ ಮದುವೆಯಾಗಿ ಎಲ್ಲರನ್ನ ನಿಭಾಯಿಸುತ್ತಿದ್ದ ರಾಜು ಬರ್ಬರವಾಗಿ ಹತ್ಯೆಯಾಗಿದ್ದರಿಂದ ಮುರೂ ಜನ ಹೆಂಡತಿಯರು ಮತ್ತು ಮಕ್ಕಳು ಬೀದಿಗೆ ಬಂದಿದ್ದಾರೆ. ಇತ್ತ ಸಾಲ ಸೋಲ ಮಾಡಿ ಅಪಾರ್ಟ್‌ಮೆಂಟ್ ಕೊಳ್ಳಲು ಹಣ ಹೂಡಿದ ಜನರು ಕೂಡ ಬೀದಿಗೆ ಬಂದಿದ್ದು, ದಿಕ್ಕೆ ತೋಚದ ಸ್ಥಿತಿಯಲ್ಲಿದ್ದಾರೆ. ಈ ಕೊಲೆ ಯಾಕೆ ಮಾಡಿದ್ರೂ ಅನ್ನೋ ಸತ್ಯಾಂಶ ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.

Last Updated : Mar 16, 2022, 5:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.