ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಜತ್ತು ಪಟ್ಟಣಕ್ಕೆ ನೀರು ಕೊಡುವುದು ಹಾಗೂ ಅವರಿಂದ ನಮ್ಮ ಭಾಗಕ್ಕೆ ನೀರು ಪಡೆಯುವ ಬಗ್ಗೆ ಮಾತುಕತೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ಅವರು, ನಾವು ಮಹಾರಾಷ್ಟ್ರಕ್ಕೆ 4 ಟಿಎಂಸಿ ಹಾಗೂ ಅವರು ನಮಗೆ 6 ಟಿಎಂಸಿ ನೀರು ಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ಖಾತೆ ಹಂಚಿಕೆ ಬಗ್ಗೆ ಸಚಿವರಲ್ಲಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಣ್ಣ-ತಮ್ಮಂದಿರ ಪರಿಹಾರದ ವಿಚಾರವನ್ನು ನ್ಯಾಯಾಲಯದಲ್ಲಿ ಸರಿಪಡಿಸ್ತಾರೆ. ಹಾಗೆಯೇ ಸಚಿವರೂ ಕೂಡಾ ತಮ್ಮ ಒಳಜಗಳ ಸರಿಪಡಿಸಿಕೊಳ್ಳುತ್ತಾರೆ. ಸಿಎಂ ಸಮಸ್ಯೆ ಬಗೆಹರಿಸಲು ಸಮರ್ಥರಿದ್ದಾರೆ, ಎಲ್ಲವೂ ಸರಿ ಹೋಗುತ್ತದೆ ಎಂದರು. ಮಹೇಶ ಕುಮಟಳ್ಳಿ ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ಮಾರ್ಚ್ ನಂತರ ಕುಮಟಳ್ಳಿ ಸಚಿವರಾಗುತ್ತಾರೆ ಎಂದರು.