ETV Bharat / city

ಎಂಇಎಸ್ ಉದ್ಧಟತನಕ್ಕೆ ಖಂಡನೆ : ಇಂದು ಕರವೇ ನಾರಾಯಣಗೌಡ ಬಣದಿಂದ ಸುವರ್ಣ ಸೌಧಕ್ಕೆ ಮುತ್ತಿಗೆ - ಕರವೇ ಕಾರ್ಯಕರ್ತರು ರ್ಯಾಲಿ

Belagavi riot: ಎಂಇಎಸ್​ ಕಾರ್ಯಕರ್ತರ ದುಂಡಾವರ್ತನೆ ವಿರುದ್ಧ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ. ಇಂದು ಟಿ. ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಕರವೇ ಕಾರ್ಯಕರ್ತರು ಸವರ್ಣ ಸೌಧ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದಾರೆ.

suvarna-soudha-gherao-by-karave-activist
ಕರವೇ ನಾರಾಯಣಗೌಡ
author img

By

Published : Dec 20, 2021, 6:55 AM IST

ಬೆಂಗಳೂರು : ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಕಾರ್ಯಕರ್ತರ ಉದ್ಧಟತನ ಖಂಡಿಸಿ ಟಿ.ನಾರಾಯಣಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕಾರ್ಯಕರ್ತರು ಇಂದು ಸುವರ್ಣ‌ ಸೌಧಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿದ್ದಾರೆ.

ಕರವೇ ನಾರಾಯಣಗೌಡ ಬಣದಿಂದ ಸುವರ್ಣ ಸೌಧ ಮುತ್ತಿಗೆ

ಈ ಕುರಿತು ಮಾತನಾಡಿರುವ ನಾರಾಯಣಗೌಡ ಅವರು, ಮ. 12 ಗಂಟೆಗೆ ಸುವರ್ಣ ಸೌಧಕ್ಕೆ ಮುತ್ತಿಗೆಗೆ ತೀರ್ಮಾನವಾಗಿದೆ. ಎಂಇಎಸ್ ನಿಷೇಧಿಸಬೇಕೆಂದು ಹೋರಾಟಗಳನ್ನ ಮಾಡಿಕೊಂಡು ಬಂದಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ದುಂಡಾವರ್ತನೆ ಮಾಡುತ್ತಿದೆ. ಎಂಇಎಸ್​​ ಕಿಡಿಗೇಡಿಗಳು ರಾಯಣ್ಣನ ಪ್ರತಿಮೆ ಭಗ್ನ ಮಾಡಿದ್ದಾರೆ. ಇಂದು ಈ ಬಗ್ಗೆ ಸದನದಲ್ಲಿ ಬಗ್ಗೆ ಚರ್ಚೆಯಾಗಬೇಕು. ಎಲ್ಲಾ ಶಾಸಕರು ಬೆಳಗಾವಿಯ ವಿಚಾರವಾಗಿ ಧ್ವನಿ ಎತ್ತಬೇಕಿದೆ ಎಂದರು.

Belagavi Karave rally : ಅಲ್ಲದೆ, ಮಹಾರಾಷ್ಟ್ರ ರಾಜಕಾರಣಿಗಳು ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಉದ್ಧಟತನದಿಂದ ಮಾತನಾಡುತ್ತಿದ್ದಾರೆ. ಕರ್ನಾಟಕದ ಬಾವುಟಕ್ಕೆ ಬೆಂಕಿ ಹಚ್ಚುವುದು, ಹೋಟೆಲ್​ಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಸಾವಿರಾರು ಕರವೇ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. 144 ಸೆಕ್ಷನ್ ಇದ್ದರೂ, ಲಾಠಿ ಪ್ರದರ್ಶನ ಮಾಡಿದ್ರೂ ಕುಗ್ಗಲ್ಲ, ಜಗ್ಗುವುದಿಲ್ಲ ಎಂದು ನಾರಾಯಣಗೌಡ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.