ETV Bharat / city

ಭಾನುವಾರದ ಬಂದ್​ಗೆ ಸಂಪೂರ್ಣ ಬೆಂಬಲ ನೀಡಿದ ಕುಂದಾನಗರಿ ಜನತೆ - ಅಂಗಡಿ-ಮುಂಗಟ್ಟು ಬಂದ್ ಮಾಡಿ ಲಾಕ್‌ಡೌನ್ ಗೆ ಸಂಪೂರ್ಣ ಬೆಂಬಲ

ಭಾನುವಾರ ಕರ್ಫ್ಯೂ ಜಾರಿ ಹಿನ್ನೆಲೆ ಕುಂದಾನಗರಿಯಲ್ಲಿ ಬಸ್ ಸಂಚಾರ, ಖಾಸಗಿ ವಾಹನ ಓಡಾಟ ಸಂಪೂರ್ಣ ಸ್ತಬ್ಧವಾಗಿದ್ದು, ಜನರು ಕೂಡ ಲಾಕ್‌ಡೌನ್​ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

sunday band in belagavi peoples suppourt
ಭಾನುವಾರದ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದ ಕುಂದಾ ನಗರಿ ಜನತೆ
author img

By

Published : May 24, 2020, 7:57 PM IST

ಬೆಳಗಾವಿ: ಭಾನುವಾರ ಕರ್ಫ್ಯೂ ಜಾರಿ ಹಿನ್ನೆಲೆ ಜಿಲ್ಲೆಯ ಜನರು ಅಂಗಡಿ-ಮುಂಗಟ್ಟು ಬಂದ್ ಮಾಡಿ ಲಾಕ್‌ಡೌನ್​ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ನಗರದಲ್ಲಿ‌ ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚಾರ ತಡೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದರು.

ಬೆಳಗಾವಿಯ ಜನಿನಿಬೀಡ ಪ್ರದೇಶವಾದ ಚೆನ್ನಮ್ಮ ಸರ್ಕಲ್, ಆರ್.ಟಿ.ಒ ಸರ್ಕಲ್, ಖಡೇಬಜಾರ್​, ಕಿರ್ಲೋಸ್ಕರ್, ಗೋವಾವೇಸ್, ಓಲ್ಡ್ ಶಹಾಪುರ ಮಾರ್ಕೆಟ್, ಕೊಲ್ಹಾಪುರ ಸರ್ಕಲ್, ಅಶೋಕ ಸರ್ಕಲ್, ಬಸ್ ನಿಲ್ದಾಣದ ಸರ್ಕಲ್‍ಗಳಲ್ಲಿ ಜನ, ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

ಇನ್ನು ಮಾರುಕಟ್ಟೆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದ್ದರ ಪರಿಣಾಮ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ರಾಜ್ಯದಲ್ಲಿ ಕೊರೊನಾ ತಡೆಗೆ ಈಗಾಗಲೇ ಮೇ 31ರವರೆಗೆ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.

ಆದರೆ, ವಿಭಿನ್ನ ಲಾಕ್‍ಡೌನ್ ನಿಯಮಗಳಿಂದಾಗಿ ನಿತ್ಯದ ವ್ಯವಹಾರಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆಯಾದರೂ ಪ್ರತಿ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮತ್ತು ಕಫ್ರ್ಯೂ ಜಾರಿಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.