ETV Bharat / city

ಬಂಗಾರ್‌ ತಗೊಂಡ್‌, ನಾವೂ ನೀವೂ ಬಂಗಾರದಂಗ್‌ ಇರೋಣು.. ಇದು 'ಉ-ಕ'ವಿಶೇಷ ದಸರಾ!

ವಿಜಯದಶಮಿಯೊಂದಿಗೆ ನಾಡಹಬ್ಬ ದಸರಾ ಸಂಪನ್ನಗೊಂಡಿದೆ. ಎಲ್ಲೆಡೆ ಶ್ರದ್ಧೆ-ಭಕ್ತಿಯಿಂದ ನವರಾತ್ರಿಯನ್ನು ಸಂಭ್ರಮಿಸಲಾಗಿದ್ದು, ಇಂದು ವಿಜಯದಶಮಿ ದಿನವನ್ನು ಉತ್ತರ ಕರ್ನಾಟಕದಲ್ಲಿ ವಿಭಿನ್ನವಾಗಿ ಆಚರಿಸಲಾಯ್ತು.

author img

By

Published : Oct 8, 2019, 11:02 PM IST

ಉತ್ತರ ಕರ್ನಾಟಕದಲ್ಲಿ ಚಿನ್ನ ವಿನಿಮಯ ಮಾಡೋ ವಿಶೇಷ ದಸರಾ

ಅಥಣಿ: ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಹಬ್ಬ-ಹರಿದಿನಗಳನ್ನು ವಿಭಿನ್ನವಾಗಿ ಆಚರಿಸುವ ಸಂಪ್ರದಾಯವಿದೆ. ಈ ಭಾಗದ ಜವಾರಿ ಮಂದಿ, ದಸರಾವನ್ನೂ ಆಚರಿಸಿದ್ದು ಹೇಗೆ ಗೊತ್ತೇ?

ಬೆಳಗಾವಿಯ ಅಥಣಿಯ ಜನರು ಬನ್ನಿ ಮರವನ್ನು ಪವಿತ್ರವೆಂದು ಪರಿಗಣಿಸುತ್ತಿದ್ದು, ಅದರ ಎಲೆಗಳನ್ನು ಬಂಗಾರವೆಂದು ನಂಬಿ ಪೂಜಿಸುತ್ತಾರೆ. ಹೀಗಾಗಿ ಈ ಬಂಗಾರವನ್ನು, ಪ್ರತಿ ಮನೆ-ಮನೆಗೆ ಹೋಗಿ ಪರಸ್ಪರ ವಿನಿಮಯ ಮಾಡಿಕೊಂಡು, ನಿಮ್ಮ ಬಾಳು ಬಂಗಾರವಾಗಲಿ ಎಂದು ಹಾರೈಸುತ್ತಾರೆ.

ಇದಕ್ಕೂ ಮುಂಚೆ ನೊಗ- ನೇಗಿಲು ಸೇರಿದಂತೆ ವಿವಿಧ ಕೃಷಿ ಸಂಬಂಧಿ ಸಲಕರಣೆಗಳನ್ನು ಪೂಜಿಸುವ 'ಖಂಡಿ ಪೂಜೆ'ಯನ್ನು ಈ ಭಾಗದಲ್ಲಿ ಅರ್ಥಪೂರ್ಣವಾಗಿ ಮಾಡಲಾಗುತ್ತದೆ. ಕೃಷಿಗೆ ಬಳಸುವ ವಿವಿಧ ಲೋಹದ ವಸ್ತುಗಳನ್ನು ತೊಳೆದು, ಅವುಗಳಿಗೆ ಪೂಜೆ ನಡೆಸಲಾಗುತ್ತದೆ. ಬಳಿಕ ಬನ್ನಿ ಮರದ ಪೂಜೆ ನೆರವೇರುತ್ತದೆ. ಪೂಜೆಯ ಬಳಿಕ ಮರದ ಎಲೆಗಳನ್ನು ಕಿತ್ತು ಇತರರಿಗೆ ವಿನಿಮಯ ಮಾಡಿಕೊಳ್ಳುತ್ತಾರೆ.

ಸಂಜೆ ವೇಳೆ ಗ್ರಾಮದೇವತೆಗೆ ಪೂಜೆ ಮಾಡಿ ಬನ್ನಿ ಎಲೆಗಳನ್ನು ದೇವರಿಗೆ ಅರ್ಪಿಸಿದ ನಂತರ, ಮನೆಯ ಹಿರಿಯರಿಗೆ ಬನ್ನಿ ಎಲೆ ನೀಡಿ, ನಾವು ನೀವು ಬಂಗಾರದಂಗೆ ಇರೋಣ ಎಂದು ಹೇಳಿ, ಹಿರಿಯರ ಕಾಲಿಗೆ ಕಿರಿಯರು ನಮಸ್ಕರಿಸುತ್ತಾರೆ.

Intro:ದಸರಾ ದಿನದಂದು
ಬನ್ನಿ ಮರದ ಅಗ್ನಿ ತತ್ವದ ರೋಪ ಹೋಂದಿದ್ದರಿಂದ ಲೋಹದ ವಸ್ತುಗಳಿಗೆ ಬನ್ನಿ ಮರದ ಎಲೆ ಶ್ರೇಷ್ಠ ಎಂದು ಜನರಲ್ಲಿ ನಂಬಿಕೆBody:
ಸಾವಿರಾರು ಕೆಜಿ ಯಸ್ಟು ಉತ್ತರ ಕರ್ನಾಟಕದ ಭಾಗದಲ್ಲಿ ಬಂಗಾರ ವಿನಿಮಯ ಮಾಡಿಕೊಂಡಿದ್ದಾರೆ ಅಬ್ಬಬ್ಬಾ ಅಲ್ಲಿ ಏನ ಸ್ಟೋರಿ ಅಂತಿರಾ ಇಲ್ಲಿದೆ ನೋಡಿ....

ಹೌದು ನೋಡಿ ಉತ್ತರ ಕರ್ನಾಟಕದ ಭಾಗದಲ್ಲಿ ಯಲ್ಲ ಹಬ್ಬ ಹರಿದಿನಗಳು ವಿಶೇಷ ಸ್ಥಾನಮಾನ ಹೋಂದಿರುವ ಕರ್ನಾಟಕ ಜವಾರಿ ಮಂದಿಯ ದಸರಾ ಹಬ್ಬವು ಕುಡಾ ವಿಭಿನ್ನವಾಗಿ ಆಚರಿಸುತ್ತಾರೆ

ಖಂಡಿ ಪುಜೆ ದಿನದಂದು ಕೃಷಿಗೆ ಸಂಬಂಧಿಸಿದ ಲೋಹದ ವಸ್ತುಗಳನ್ನು ತೋಳೆದು ಅವಕ್ಕೆ ಪೂಜೆ ನಡೆಸಲಾಗುತ್ತದೆ ತದನಂತರ ಬನ್ನಿ ಮರ ಪೂಜೆ ನಡೆಸಲಾಗುತ್ತದೆ ನಂತರವಾಗ ಪೂಜೆ ಸಲ್ಲಿಸಿ ಮರದ ಎಲೆಗಳು ಹರಿಯುತ್ತಾರೆ

ಬನ್ನಿ ಮರದ ಅಗ್ನಿ ತತ್ವದ ರೋಪ ಹೋಂದಿದ್ದರಿಂದ ಲೋಹದ ವಸ್ತುಗಳಿಗೆ ಬನ್ನಿ ಮರದ ಎಲೆ ಶ್ರೇಷ್ಠ ಎಂದು ಜನರಲ್ಲಿ ನಂಬಿಕೆ

ತದನಂತರ ಸಂಜೆ ಆಗುತ್ತಿದ್ದಂತೆ ಗ್ರಾಮದ ದೇವತೆಗೆ ನಮಸ್ಕಾರ ಮಾಡಿ ಬನ್ನಿ ಎಲೆಗಳನ್ನು ದೇವರಿಗೆ ಅರ್ಪಿಸಿ ನಂತರ ಮನೆಯ ಹಿರಿಯರಿಗೆ ಬನ್ನಿ ಎಲೆ ನೀಡಿ ನಾವು ನಿವು ಬಂಗಾರದಂಗ ಇರುನು ಅಂತ ಹೇಳಿ ಹಿರಿಯರ ಕಾಲಿಗೆ ಕಿರಿಯರು ಬಿಳ್ಳುತ್ತಾರೆ

ನಂತರವಾಗಿ ಊರು ತುಂಬಾ ತಿರುಗಾಡಿ ಮನೆ ಮನೆ ಓನಿ ತುಂಬಾ ಬಂಗಾರ ವಿನಿಮಯ ಮಾಡಿಕೊಳ್ಳುವರು ಇದು ಉತ್ತರ ಕರ್ನಾಟಕದ ಭಾಗದಲ್ಲಿ ದಸರಾ ಆಚರಣೆ.....

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.