ಚಿಕ್ಕೋಡಿ: ಕರ್ನಾಟಕ - ಮಹಾರಾಷ್ಟ್ರದ ಗಡಿಯಲ್ಲಿ ಜನರು ಅನ್ಯೋನ್ಯವಾಗಿದ್ದಾರೆ. ಎರಡು ರಾಜ್ಯದ ಜನ ಅವಲಂಬಿತರಾಗಿದ್ದು, ಶಿವಸೇನೆ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿಯುವುದು, ಖಾಸಗಿ ವಾಹನಗಳನ್ನು ತಡೆದು ಜೈ ಮಹಾರಾಷ್ಟ್ರ ಎಂದು ಪೊಸ್ಟರ್ ಹಚ್ಚುವುದು ದೊಡ್ಡ ತಪ್ಪು ಎಂದು ಜವಳಿ ಹಾಗೂ ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡದಲ್ಲಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಜನ ವೈದ್ಯಕೀಯ ಚಿಕಿತ್ಸೆಗಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಹೀಗಾಗಿ ಇದರಿಂದ ಜನತೆಗೂ ತೊಂದರೆಯಾಗಿದ್ದು, ಶಿವಸೇನೆ ಹೀಗೆ ಮಾಡುವುದರಿಂದ ಏನು ಸಾಧನೆ ಮಾಡುತ್ತದೆ. ಇದರಿಂದ ಎರಡೂ ರಾಜ್ಯದ ಸಂಬಂಧಕ್ಕೆ ತೊಂದರೆಯಾಗುತ್ತದೆ ಎಂದರು.
ಯಾಕೆ ಈ ರೀತಿ ಶಿವಸೇನೆ ಪುಂಡಾಟಿಕೆ ಮಾಡುತ್ತಿದೆ ಎಂದು ನನಗೂ ಗೊತ್ತಿಲ್ಲ. ಈ ವಿಚಾರವಾಗಿ ನಾನೂ ವಿಚಾರಣೆ ಮಾಡುತ್ತೇನೆ. ಶಿವಸೇನೆ ಈ ರೀತಿ ಮಾಡುವುದರಿಂದ ಏನೂ ಆಗುವುದಿಲ್ಲ. ಈ ವಿಚಾರವಾಗಿ ಕೇಂದ್ರಕ್ಕೆ ತಿಳಿಸುವುದಿಲ್ಲ. ಮಿನಿಸ್ಟರ್ ಲೆವೆಲ್ ಇದೆ, ನಮ್ಮ ಮಿನಿಸ್ಟರ್ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.