ETV Bharat / city

ಬೆಳಗಾವಿ ಶಾಹಿ ಮಸೀದಿ ವರ್ಸಸ್ ಮಂದಿರ ವಿವಾದ: ಬೆಳಗಾವಿ ಉತ್ತರ, ದಕ್ಷಿಣ ಶಾಸಕರ ತದ್ವಿರುದ್ಧ ಹೇಳಿಕೆ..! - ಶಾಸಕ ಅಭಯ್ ಪಾಟೀಲ

ಕಾಂಗ್ರೆಸ್​ನ ಮಾಜಿ ಶಾಸಕ ಫಿರೋಜ್ ಸೇಠ್ ಶಾಹಿ‌ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರನ್ನು ಭೇಟಿಯಾಗಿ 1991ರ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದು, ಅನಿಲ್ ಬೆನಕೆ ಫಿರೋಜ್ ಸೇಠ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

MLA Anil Benake
ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ
author img

By

Published : Jun 9, 2022, 11:03 AM IST

ಬೆಳಗಾವಿ: ನಗರದ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ವರ್ಸಸ್ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕರು ವಿಭಿನ್ನ ಹೇಳಿಕೆ ನೀಡಿದ್ದು, ಶಾಸಕ ಅಭಯ್ ಪಾಟೀಲ ನಡೆಗೆ ಪರೋಕ್ಷವಾಗಿ ಅನಿಲ್ ಬೆನಕೆ ಅಸಮಾಧಾನಗೊಂಡರಾ ಎಂಬ ಅನುಮಾನ ಮೂಡಿದೆ.

ನಗರದ ಬಾಪಟ್ ಗಲ್ಲಿಯಲ್ಲಿರುವ ಶಾಹಿ‌ ಮಸೀದಿ ಹಿಂದೆ ಮಂದಿರವಾಗಿತ್ತು‌ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ ಡಿಸಿ ಭೇಟಿಯಾಗಿ ಸರ್ವೇ ಸತ್ಯಾಂಶ ತಿಳಿಸುವಂತೆ ಮನವಿ ಮಾಡಿಕೊಂಡಿದ್ದರು. ಬೆಳಗಾವಿ ಉತ್ತರ ಕ್ಷೇತ್ರದ ವ್ಯಾಪ್ತಿಗೆ ಬರುವ ಶಾಹಿ ಮಸೀದಿಯ ವಿಡಿಯೋ ಸರ್ವೆಗೆ ಆಗ್ರಹಿಸಿ ಡಿಸಿಗೆ ಶಾಸಕ ಅಭಯ್ ಪಾಟೀಲ ಮನವಿ ಮಾಡಿದ್ದರು.

ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ

ಅಭಯ್ ಪಾಟೀಲ್ ಮನವಿಗೆ ಅನಿಲ್ ಬೆನಕೆ ತದ್ವಿರುದ್ಧ ಹೇಳಿಕೆ ನೀಡಿದ್ದು, '1991ರ ಕಾಯ್ದೆ ಪ್ರಕಾರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಿ. ಶಾಹಿ ಮಸೀದಿ ವಿವಾದದ ಬಗ್ಗೆ ಮಾಹಿತಿ ಪಡೆಯಲು ಎಲ್ಲರಿಗೂ ಹೇಳಿದ್ದೇವೆ. ಅದರ ಬಗ್ಗೆ ಮಾಹಿತಿ ಇದ್ದರೆ 1991ರ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ.

ಕಾಯ್ದೆ ಪ್ರಕಾರ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿರುವ ಯಾವುದೇ ಧಾರ್ಮಿಕ ಸ್ವರೂಪ ಬದಸಲಿಸುವಂತಿಲ್ಲ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಹೀಗಾಗಿ ಅಭಯ್ ಪಾಟೀಲ ಹೇಳಿಕೆಯಿಂದ ಅನಿಲ್ ಬೆನಕೆ ತಮ್ಮ ಕ್ಷೇತ್ರದಲ್ಲಿರುವ ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಇತ್ತ ಕಾಂಗ್ರೆಸ್​ನ ಮಾಜಿ ಶಾಸಕ ಫಿರೋಜ್ ಸೇಠ್ ಶಾಹಿ‌ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರನ್ನು ಭೇಟಿಯಾಗಿ 1991ರ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಇದೆಲ್ಲವನ್ನು ನೋಡಿದರೆ ಬಿಜೆಪಿ ಶಾಸಕ ಅನಿಲ್ ಬೆನಕೆ ಕಾಂಗ್ರೆಸ್ ಮಾಜಿ ಶಾಸಕ ಫಿರೋಜ್ ಸೇಠ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇದನ್ನೂ ಓದಿ: ಬ್ರಾಹ್ಮಣರು-ಮುಸ್ಲಿಮರೆಲ್ಲ ಸೇರಿಯೇ ಬೆಳಗಾವಿ ಶಾಹಿ ಮಸೀದಿ ನಿರ್ಮಾಣ : ಮುಸ್ಲಿಂ ಲೀಗ್ ನಾಯಕ ಅಗಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.