ETV Bharat / city

ರಮೇಶ್ ಕುಮಾರ್ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ, ಆಗ ಅವರ ಕಷ್ಟ ಗೊತ್ತಾಗುತ್ತೆ: ಸಚಿವ ಮುನಿರತ್ನ

ಹೆಣ್ಣು ಒಬ್ಬಳು ತಾಯಿ, ತಂಗಿ‌, ಮಗಳು ಎಲ್ಲಾ ಆಗಿರುತ್ತಾರೆ. ಅದನ್ನು ಯೋಚನೆ ಮಾಡಿ ಮಾತನಾಡಬೇಕು. ಅದು ಅವರ ಸಣ್ಣತನ. ಅವರ ಹಿರಿತನಕ್ಕೆ ಈ ಹೇಳಿಕೆ ಶೋಭೆ ತರಲ್ಲ. ಒಬ್ಬ ಹಿರಿಯರು, ಮಾಜಿ ಸ್ಪೀಕರ್ ಆಗಿದ್ದವರು, ಅತೀ ಬುದ್ಧಿವಂತರು. ಭೂಮಿಯಲ್ಲಿ ಯಾರೂ ಕಂಡರಿಯದಂಥ ಅಷ್ಟೂ ಜ್ಞಾನ ಇದ್ದವರು. ಹೆಣ್ಣಿನ ಬಗ್ಗೆ ಈ ರೀತಿ ಮಾತನಾಡಬಾರದು. ಇದನ್ನು ನಾನು ಖಂಡಿಸುತ್ತೇನೆ..

Ramesh Kumar should be born girl in his next birth - minister munirathna
ರಮೇಶ್ ಕುಮಾರ್ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ, ಆಗ ಅವರ ಕಷ್ಟ ಗೊತ್ತಾಗುತ್ತೆ: ಸಚಿವ ಮುನಿರತ್ನ
author img

By

Published : Dec 17, 2021, 12:49 PM IST

Updated : Dec 17, 2021, 1:32 PM IST

ಬೆಳಗಾವಿ : ವಿಧಾನಸಭೆ ಮಾಜಿ ಸ್ಪೀಕರ್‌, ಹಾಲಿ ಶಾಸಕ ರಮೇಶ್ ಕುಮಾರ್ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ ಎಂದು ಸಚಿವ ಮುನಿರತ್ನ ವಾಗ್ದಾಳಿ ನಡೆಸಿದರು.

ರಮೇಶ್ ಕುಮಾರ್ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ, ಆಗ ಅವರ ಕಷ್ಟ ಗೊತ್ತಾಗುತ್ತೆ: ಸಚಿವ ಮುನಿರತ್ನ

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಅವರಿಗೆ ಹೆಣ್ಣಿನ ಕಷ್ಟ ಗೊತ್ತಿಲ್ಲ. ಅವರು ಸೀರೆ ಉಟ್ಟುಕೊಂಡು ರಸ್ತೆಯಲ್ಲಿ ಹೋಗಲಿ. ಆಗ ಅವರಿಗೆ ಹೆಣ್ಣಿನ ಪರಿಸ್ಥಿತಿ ಗೊತ್ತಾಗುತ್ತದೆ ಎಂದು ಕಿಡಿ ಕಾರಿದರು.

ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ, ಒಂದು ಹೆಣ್ಣಿಗೆ ಏನು ಅಪಮಾನ‌ ಮಾಡಿದ್ದಾರೋ ಅದು ಅವರಿಗೂ ಅನುಭವ ಆಗಲಿ. ಇಷ್ಟು ಬುದ್ದಿವಂತರಾಗಿ. ಅವರಿಗೆ ಬುದ್ಧಿ ಹೇಳುವ ಶಕ್ತಿ ನಮಗಿಲ್ಲ. ಹೆಣ್ಣನ್ನು ಗೌರವಿಸುವುದನ್ನು ಅವರು ಕಲಿಯಬೇಕು. ಈ ರೀತಿ ಹಗುರವಾಗಿ ಮಾತನಾಡಬಾರದು ಎಂದರು.

ಹೆಣ್ಣು ಒಬ್ಬಳು ತಾಯಿ, ತಂಗಿ‌, ಮಗಳು ಎಲ್ಲಾ ಆಗಿರುತ್ತಾರೆ. ಅದನ್ನು ಯೋಚನೆ ಮಾಡಿ ಮಾತನಾಡಬೇಕು. ಅದು ಅವರ ಸಣ್ಣತನ. ಅವರ ಹಿರಿತನಕ್ಕೆ ಈ ಹೇಳಿಕೆ ಶೋಭೆ ತರಲ್ಲ.

ಒಬ್ಬ ಹಿರಿಯರು, ಮಾಜಿ ಸ್ಪೀಕರ್ ಆಗಿದ್ದವರು, ಅತೀ ಬುದ್ಧಿವಂತರು. ಭೂಮಿಯಲ್ಲಿ ಯಾರೂ ಕಂಡರಿಯದಂಥ ಅಷ್ಟೂ ಜ್ಞಾನ ಇದ್ದವರು. ಹೆಣ್ಣಿನ ಬಗ್ಗೆ ಈ ರೀತಿ ಮಾತನಾಡಬಾರದು. ಇದನ್ನು ನಾನು ಖಂಡಿಸುತ್ತೇನೆ ಎಂದರು.

ಇದನ್ನೂ ಓದಿ: ಅತ್ಯಾಚಾರದ ಕುರಿತ ಹೇಳಿಕೆ.. ಮಹಿಳೆಯರಿಗೆ ನೋವಾಗಿದ್ರೇ ಪ್ರಾಮಾಣಿಕವಾಗಿ ಕ್ಷಮೆ ಕೋರುವೆ.. ರಮೇಶ್​ ಕುಮಾರ್​

Last Updated : Dec 17, 2021, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.