ETV Bharat / city

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಸಂಭ್ರಮಾಚರಣೆ ಬೇಡ: ರಮೇಶ್​ ಜಾರಕಿಹೊಳಿ

author img

By

Published : Feb 28, 2020, 8:28 PM IST

ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜಲ ಸಂಪನ್ಮೂಲ‌ ಸಚಿವ ರಮೇಶ್​ ಜಾರಕಿಹೊಳಿಗೆ ಅಭಿನಂದನೆ ಸಲ್ಲಿಸಲು ರೈತರು ಮುಗಿಬಿದ್ದರು. ಈ ವೇಳೆ ಮಾತನಾಡಿದ ಸಚಿವರು, ದೇಶದ ಎಲ್ಲ ರೈತರು ಒಂದೇ. ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ಇದೆ. ಅಲ್ಲಿಯವರೆಗೂ ಕಾದು ನೋಡೋಣ ಎಂದರು.

Ramesh Jarakiholi
ರಮೇಶ್​ ಜಾರಕಿಹೊಳಿ

ಬೆಳಗಾವಿ: ನಗರದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಲ ಸಂಪನ್ಮೂಲ‌ ಸಚಿವ ರಮೇಶ್​ ಜಾರಕಿಹೊಳಿಗೆ ಅಭಿನಂದನೆ ಸಲ್ಲಿಸಲು ರೈತರು ಮುಗಿಬಿದ್ದಿದ್ದರು.

ಮಹದಾಯಿ ಹೋರಾಟಗಾರರಿಗೆ ಸದ್ಯಕ್ಕೆ ಸಂಭ್ರಮಾಚರಣೆ ಬೇಡವೆಂದ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿರುವ ಕಣಕುಂಬಿಗೆ (ಫೆ.29) ರಂದು ಭೇಟಿ ನೀಡುತ್ತೇನೆ. ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಶನ್​ ಕೇವಲ ರಾಜ್ಯದ ರೈತರ ಗೆಲುವು ಮಾತ್ರವಲ್ಲದೇ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ರೈತರ ಗೆಲುವಾಗಿದೆ. ಎಲ್ಲರೂ ನಮ್ಮ ರೈತರೇ ಎಂದರು.

ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ಮಹದಾಯಿ ನದಿ ನೀರು ಹಂಚಿಕೆ ವಿಷಯ ವಿಚಾರಣೆಗೆ ಬರುತ್ತಿದೆ. ಇನ್ನು ಒಂದು ವಾರದವರೆಗೆ ಯಾರು ಸಂಭ್ರಮ, ಆಚರಣೆ ಮಾಡಬಾರದು ಎಂದು ರೈತರಲ್ಲಿ ರಮೇಶ್​ ಜಾರಕಿಹೊಳಿ ಮನವಿ ಮಾಡಿದರು. ಸೋಮವಾರ ಮಹದಾಯಿ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ. ಹಾಗಾಗಿ ಮಹದಾಯಿ ವಿಚಾರವಾಗಿ ಬಹಿರಂಗ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.