ಅಥಣಿ: ಲಾಕ್ಡೌನ್ನಿಂದಾಗಿ ರೈತರ ಬೆಳೆ ಮೇಲೆ ಭಾರಿ ಹೊಡೆತ ಬಿದ್ದ ಪರಿಣಾಮ ಎಚ್ಚೆತ್ತ ರಾಜ್ಯ ಸರ್ಕಾರ, ಕೃಷಿ ಮಾರುಕಟ್ಟೆಗೆ ಮುಕ್ತ ಅವಕಾಶ ಕಲ್ಪಿಸಿದೆ.
ಕೃಷಿ ವಲಯಕ್ಕೆ ಸರ್ಕಾರ ಲಾಕ್ಡೌನ್ ಆದೇಶ ಸಡಿಲಿಸಿದ ಕಾರಣ ಇಂದು ಅಥಣಿಯಲ್ಲಿ ವಾಹನಗಳಲ್ಲಿ ರೈತರು ಹಣ್ಣು-ತರಕಾರಿ ಮಾರಾಟ ಮಾಡಿದರು. ಇಷ್ಟ ದಿನ ವಾಹನ ಸಂಚಾರಕ್ಕೆ ತಡೆ ನೀಡಿದ್ದ ಪರಿಣಾಮ ಹಲವು ತರಕಾರಿ ಬೆಳೆಗಳು ಜಮೀನಿನಲ್ಲೇ ಕೊಳೆತು ಹೋಗಿವೆ.