ಬೆಳಗಾವಿ: ನಿನ್ನೆ ಸಂಜೆ ಸುರಿದ ಮಳೆಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹುಲಿಕೊತ್ತಲ ಗ್ರಾಮದಲ್ಲಿ ಮತ್ತೊಂದು ಮನೆ ಗೋಡೆ ಕುಸಿತ ಸಂಭವಿಸಿತು.
ಕಲ್ಲಪ್ಪ ಮುದಕಪ್ಪ ಬಿಳಕಿ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಕಳೆದೊಂದು ವಾರದ ಅಂತರದಲ್ಲಿ ಒಟ್ಟು ಮೂರು ಮನೆಗಳು ಕುಸಿತಗೊಂಡಿವೆ. ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಬೆಳಗಾವಿ ಜಿಲ್ಲೆ ಭೀಕರ ಜಲಪ್ರಳಯಕ್ಕೆ ತುತ್ತಾಗಿದೆ. ಈ ವೇಳೆ ಶಿಥಿಲಾವಸ್ಥೆಗೊಂಡಿರುವ ಹಲವು ಮನೆ ಗೋಡೆ ಕುಸಿಯುತ್ತಿವೆ.
ಅಕ್ಟೋಬರ್ 6ರಂದು ಬಡಾಲ ಅಂಕಲಗಿಯಲ್ಲಿ ಮನೆಗೋಡೆ ಕುಸಿದು ಬಿದ್ದು 7 ಜನ ದುರ್ಮರಣ ಹೊಂದಿದ್ದರು. ಅಕ್ಟೋಬರ್ 10ರಂದು ದೇಸೂರು ಬಳಿ ತಗಡಿನ ಶೆಡ್ ಕುಸಿದು ಇಬ್ಬರು ಸಾವನ್ನಪ್ಪಿದ್ದರು. ಅಕ್ಟೋಬರ್ 10 ರ ರಾತ್ರಿ ಅಗಸಗಿಯಲ್ಲಿಯೂ ಮನೆ ಗೋಡೆ ಕುಸಿಯಿತು. ಒಂದು ವಾರದ ಅಂತರದಲ್ಲಿ ಮೂರು ಮನೆ ಗೋಡೆ, ಒಂದು ತಗಡಿನ ಶೆಡ್ ಕುಸಿದು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:
ಬೆಳಗಾವಿಯಲ್ಲಿ ಭಾರಿ ಮಳೆಗೆ ಮತ್ತೊಂದು ಮನೆ ಕುಸಿತ; ಕೂದಲೆಳೆ ಅಂತರದಲ್ಲಿ 8 ಜನ ಬಚಾವ್!
ಮನೆ ಗೋಡೆ ಕುಸಿತ ಪ್ರಕರಣ: ಒಂದೇ ಕುಟುಂಬದ 6 ಜನ ಮೃತ, ಇಬ್ಬರು ಬಚಾವ್ ಆಗಿದ್ದೇಗೆ?