ಬೆಳಗಾವಿ: ಇಲ್ಲಿ ಹಣ ಕೊಟ್ಟು ಗ್ರಾಮಸ್ಥರು ಕುಡಿಯುವ ನೀರು ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ತವರು ಕ್ಷೇತ್ರ ಯಮಕನಮರಡಿಯಲ್ಲಿ.
ಜಿಲ್ಲೆಯ ಯಮಕನಮರಡಿ ವಿಧಾನಸಭೆ ವ್ಯಾಪ್ತಿಯಲ್ಲಿ ಬರುವ ವಂಟಮುರಿ ಗ್ರಾಮದಲ್ಲಿ ತೀವ್ರವಾಗಿ ಬರಗಾಲ ವ್ಯಾಪಿಸಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ದಿನನಿತ್ಯ ನೀರು ಪಡೆಯಬೇಕಾದರೆ ಹಣ ನೀಡಬೇಕಾಗಿದೆ.
ಒಂದು ಕ್ಯಾನ್ ನೀರಿಗೆ 400 ರೂ. ನೀಡಬೇಕಾಗಿದ್ದು, ಜಿಲ್ಲಾಡಳಿತ ಮಾತ್ರ ಕೈಕಟ್ಟಿ ಕುಳಿತಿರುವುದು ವಿಪರ್ಯಾಸ ಅಂತಾರೆ ಇಲ್ಲಿನ ಗ್ರಾಮಸ್ಥರು.