ETV Bharat / city

ಪರಿಷತ್ ಚುನಾವಣೆಗೆ ಲಖನ್​​ ಜಾರಕಿಹೊಳಿ ಸ್ಪರ್ಧೆ ಬಗ್ಗೆ ಮಾಹಿತಿಯಿಲ್ಲ: ಮಾಜಿ ಡಿಸಿಎಂ ಸವದಿ - ಲಖನ್​​ ಜಾರಕಿಹೊಳಿ ಸ್ಪರ್ಧೆ

ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ನಾನು ಪತ್ರಿಕೆಯಲ್ಲಿ ನೋಡಿದ್ದೇನೆ. ಈವರೆಗೆ ಬೆಳಗಾವಿ ಜಿಲ್ಲೆಗೆ ಪಕ್ಷದ 2ನೇ ಅಭ್ಯರ್ಥಿಯ ಸ್ಪರ್ಧೆ ಚರ್ಚೆ ನಡೆದಿಲ್ಲ. ಹಾಗೆ ಇನ್ನೂ ನಾಮಪತ್ರ ಸಲ್ಲಿಕೆಯಾಗಿಲ್ಲ. ಯಾವುದೇ ಚರ್ಚೆ ನಡೆದರೂ ಅಪ್ರಸ್ತುತ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್​​ ಸವದಿ (Former DCM Laxman Savadi) ಹೇಳಿದರು.

Former DCM Savadi
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ
author img

By

Published : Nov 20, 2021, 4:02 PM IST

ಅಥಣಿ(ಬೆಳಗಾವಿ): ವಿಧಾನಪರಿಷತ್ ಚುನಾವಣೆಯಲ್ಲಿ(legislative council election) ಲಖನ್​​ ಜಾರಕಿಹೊಳಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ನಾನು ಪತ್ರಿಕೆಯಲ್ಲಿ ನೋಡಿದ್ದೇನೆ. ಜಾರಕಿಹೊಳಿ ಸ್ಪರ್ಧೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಮುನ್ನೆಲೆಗೆ ಬಂದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್​​ ಸವದಿ(Former DCM Laxman Savadi) ಹೇಳಿದರು.

ಪರಿಷತ್ ಚುನಾವಣೆಗೆ ಲಖನ್​​ ಜಾರಕಿಹೊಳಿ ಸ್ಪರ್ಧೆ ಬಗ್ಗೆ ಮಾಹಿತಿಯಿಲ್ಲ: ಮಾಜಿ ಡಿಸಿಎಂ ಸವದಿ

ಅಥಣಿ ಪಟ್ಟಣದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯರ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ 20 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ(ಶುಕ್ರವಾರ) ವರಿಷ್ಠರು ಬಿಡುಗಡೆ ಮಾಡಿದ್ದಾರೆ.

25 ಕ್ಷೇತ್ರದಲ್ಲಿ ಚುಣಾವಣೆ ನಡೆಯುತ್ತಿದೆ. ಬಿಜೆಪಿ ರಾಜ್ಯ ಕೋರ್ ಕಮಿಟಿಯಿಂದ 20 ಅಭ್ಯರ್ಥಿಗಳನ್ನು ಅಂತಿಮವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪ್ರಕಾರ ಪಟ್ಟಿಯನ್ನು ಕೇಂದ್ರ ಬಿಡುಗಡೆ ಮಾಡಿದೆ. 5 ಜಿಲ್ಲೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತಿದೆ. ಆದರೆ ಒಂದೇ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದಾಗ ಒಬ್ಬರ ಆಯ್ಕೆ ನಮ್ಮ ಮುಂದಿದೆ ಎಂದರು.

ಬೆಳಗಾವಿ ಎರಡು ಕ್ಷೇತ್ರ, ವಿಜಯಪುರ- ಬಾಗಲಕೋಟೆ ಎರಡು ಕ್ಷೇತ್ರ, ಮೈಸೂರು- ಚಾಮರಾಜನಗರ ಎರಡು ಕ್ಷೇತ್ರ, ಚಿಕ್ಕಮಂಗಳೂರು-ಉಡುಪಿ ಎರಡು ಕ್ಷೇತ್ರ, ಧಾರವಾಡ- ಗದಗ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಬದಲು ಆಯಾ ಕ್ಷೇತ್ರದಲ್ಲಿ ಒಬ್ಬರು ಸ್ಪರ್ಧಿಸಬೇಕೆಂಬ ಬಗ್ಗೆ ಅಂತಿಮವಾಗಿದೆ ಎಂದು ಸವದಿ ತಿಳಿಸಿದರು.

ಗ್ರಾಮ ಪಂಚಾಯತ್​ ಸದಸ್ಯರ ಜತೆ ಬಿಎಸ್​​ವೈ ಸಭೆ

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ 11 ಗಂಟೆಗೆ ಚಿಕ್ಕೋಡಿ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಗ್ರಾಮ ಪಂಚಾಯತ್​ ಸದಸ್ಯರ ಜತೆ ಸಭೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಭೆ ಮಾಡಲಾಗುವುದು ಎಂದು ಇದೇ ವೇಳೆ ಸವದಿ ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ 12 ಶಾಸಕರು, 3 ಲೋಕಸಭಾ ಸದಸ್ಯರಿದ್ದಾರೆ. ಇದರಿಂದ ಭಾರತಿ ಜನತಾ ಪಕ್ಷಕ್ಕೆ ಬಲ ಇದೆ. ಈ ಬಾರಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗು ಪುರಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿಲ್ಲ. ಗ್ರಾಮ ಪಂಚಾಯತ್​ನಲ್ಲಿ 8,700 ಮತದಾರರಿರುವುದರಿಂದ 5000ಕ್ಕೂ ಹೆಚ್ಚು ಮತವನ್ನು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪಡೆಯುವ ಮೂಲಕ ಬಾರಿ ಅಂತರದಿಂದ ಜಯ ಸಾಧಿಸುತ್ತಾರೆ ಎಂದು ಲಕ್ಷ್ಮಣ್ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Farm Laws: ಮೃತ ರೈತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಿ.. ಪ್ರಧಾನಿಗೆ ವರುಣ್​ ಗಾಂಧಿ ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.