ETV Bharat / city

ಬೆಳಗಾವಿಯ ನೂತನ ಪೊಲೀಸ್ ಆಯುಕ್ತರಾಗಿ ಡಾ. ಬೋರಲಿಂಗಯ್ಯ ಅಧಿಕಾರ ಸ್ವೀಕಾರ - ನೂತನ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅಧಿಕಾರ ಸ್ವೀಕಾರ

ಬೆಳಗಾವಿ ಅಧಿವೇಶನ ವೇಳೆ ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಆರೋಪಕ್ಕೆ ನಿಕಟಪೂರ್ವ ಆಯುಕ್ತ ಕೆ.ತ್ಯಾಗರಾಜನ್ ಗುರಿಯಾಗಿದ್ದು, ಅವರನ್ನು ವರ್ಗಾವಣೆ ಮಾಡಲಾಗಿತ್ತು.

New police commissioner  for belagavi
ಬೆಳಗಾವಿಯ ನೂತನ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅಧಿಕಾರ ಸ್ವೀಕಾರ
author img

By

Published : Jan 1, 2022, 11:01 PM IST

Updated : Jan 1, 2022, 11:08 PM IST

ಬೆಳಗಾವಿ: ಜಿಲ್ಲೆಯ ನೂತನ ಪೊಲೀಸ್ ಆಯುಕ್ತರಾಗಿ ಡಾ.ಬೋರಲಿಂಗಯ್ಯ ಅವರು ಇಲ್ಲಿನ ಕಮೀಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರು ಡಾ.ಬೋರಲಿಂಗಯ್ಯ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಬೆಳಗಾವಿ ಅಧಿವೇಶನ ವೇಳೆ ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಆರೋಪಕ್ಕೆ ನಿಕಟಪೂರ್ವ ಆಯುಕ್ತ ಕೆ.ತ್ಯಾಗರಾಜನ್ ಗುರಿಯಾಗಿದ್ದರು. ಹೀಗಾಗಿ ಕೆ. ತ್ಯಾಗರಾಜನ್ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

New police commissioner  for belagavi
ಅಧಿಕಾರ ಸ್ವೀಕಾರ ಸಮಾರಂಭ

ನೂತನ ಪೊಲೀಸ್ ಆಯುಕ್ತರಾಗಿ ಸರ್ಕಾರ ಡಾ.ಬೋರಲಿಂಗಯ್ಯ ಅವರನ್ನು ನೇಮಕ ಮಾಡಿತ್ತು. ಶನಿವಾರ ಸಂಜೆ ಬೆಳಗಾವಿಗೆ ಆಗಮಿಸಿದ ಡಾ.ಬೋರಲಿಂಗಯ್ಯ ಅಧಿಕಾರ ಸ್ವೀಕರಿಸಿದರು. ಬಳಿಕ ಕೆಎಲ್ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ನೂತನ ಆಯುಕ್ತ ಡಾ. ಬೋರಲಿಂಗಯ್ಯ ಅವರಿಗೆ ಸ್ವಾಗತ ಹಾಗೂ ನಿಕಟಪೂರ್ವ ಆಯುಕ್ತ ಕೆ.ತ್ಯಾಗರಾಜನ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ಬೆಳಗಾವಿ ಕಮಿಷನರ್ ತ್ಯಾಗರಾಜನ್​​ ತಲೆದಂಡ.. ನೂತನ ಆಯುಕ್ತರಾಗಿ ಡಾ.ಬೋರಲಿಂಗಯ್ಯ

Last Updated : Jan 1, 2022, 11:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.