ETV Bharat / city

ಬೆಳಗಾವಿ ಯುವಕನ ಕೊಲೆ ಕೇಸ್​.. ನಾಲ್ವರು ಆರೋಪಿಗಳು ಅರೆಸ್ಟ್

author img

By

Published : Apr 5, 2022, 10:56 PM IST

ತಂದೆ ಕೊಟ್ಟ ಹಣವನ್ನು ವಾಪಸ್ ಕೇಳಿದ ವಿಚಾರವಾಗಿ ಗಲಾಟೆಯಾಗಿ ಅದು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Four accused Arrest
ಡಾ.ಬೋರಲಿಂಗಯ್ಯ

ಬೆಳಗಾವಿ: ಜಿಲ್ಲೆಯ ರಣಕುಂಡೆಯೆ ಗ್ರಾಮದಲ್ಲಿ‌ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರವಾಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪ್ರಮೋದ ಪಾಟೀಲ್ (31), ಶ್ರೀಧರ ಪಾಟೀಲ್(28), ಮಹೇಂದ್ರ ಕಂಗ್ರಾಳಕರ (21), ಬೂಮನಿ ಡೋಕ್ರೆ (33) ಬಂಧಿತರು‌.

ಬೆಳಗಾವಿ ತಾಲೂಕಿನ ರಣಕುಂಡೆಯೆ ಗ್ರಾಮದ ನಿವಾಸಿ ನಾಗೇಶ ಪಾಟೀಲ(31) ಎಂಬುವವರ ಭೀಕರವಾಗಿ ಹತ್ಯೆಯಾಗಿತ್ತು. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್​ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಅವರನ್ನು ಆದಷ್ಟು ಬೇಗ ಬಂಧನ ಮಾಡಲಾಗುತ್ತದೆ ಎಂದು ಕಮಿಷನರ್ ಡಾ.ಬೋರಲಿಂಗಯ್ಯ ಹೇಳಿದ್ದಾರೆ.

ರಣಕುಂಡೆಯೆ ಯುವಕನ ಕೊಲೆ: ನಾಲ್ವರು ಆರೋಪಿಗಳು ಅರೆಸ್ಟ್

ಪ್ರಕರಣ ಹಿನ್ನೆಲೆ ನೋಡೋದಾದ್ರೆ ಬೆಳಗಾವಿ ತಾಲೂಕಿನ ರಣಕುಂಡೆಯೆ ಗ್ರಾಮದಲ್ಲಿ ಮನೆಯಲ್ಲಿ ಮಲಗಿಕೊಂಡಿದ್ದ ನಾಗೇಶ ಪಾಟೀಲ್ ಎಂಬುವವರನ್ನ ಬಲವಂತವಾಗಿಯೇ ಹೊರಗಡೆ ಕರೆದುಕೊಂಡು ಹೋಗಿ ಭೀಕರವಾಗಿ ಕೊಲೆಗೈದು ಮನೆಯ ಮುಂದೆ ಬಿಸಾಡಿ ಹೋಗಿದ್ದರು. ಇದಲ್ಲದೇ ಸಹೋದರ ನಾಗೇಶ ಪಾಟೀಲ ರಕ್ಷಣೆಗೆ ಮುಂದಾದ ಆತನ ಸಹೋದರ ಮನೋಜ ಪಾಟೀಲ್ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದರು.

ಮಾರಣಾಂತಿಕ ಹಲ್ಲೆಯಿಂದ ನಾಗೇಶ ಪಾಟೀಲ್ ಸಾವನ್ನಪ್ಪಿದ್ದನು. ಇತ್ತ ಗಂಭೀರ ಗಾಯಗೊಂಡ ಮನೋಜ ಪಾಟೀಲ ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಹಾವೇರಿ: ಮಳೆ ಗಾಳಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮಹಿಳೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.