ETV Bharat / city

ನೀರಿನ ಸಮಸ್ಯೆ ಪರಿಹರಿಸದಿದ್ದರೆ ಕ್ರಮ : ಅಧಿಕಾರಿಗಳಿಗೆ ಶಾಸಕ ಅನಿಲ್​ ಬೆನಕೆ ವಾರ್ನಿಂಗ್ - ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಶಾಸಕ ಸೂಚನೆ

ನಿಮ್ಮ‌ ತಪ್ಪು ಮುಚ್ಚಿಕೊಳ್ಳಲು ಕಾರಣ ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೆ ಟ್ಯಾಂಕರ್ ಮೂಲಕವಾದರೂ ಜನರಿಗೆ ನೀರು ಪೂರೈಸಬೇಕು. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು..

mla-anil-benake
ಅನಿಲ್​ ಬೆನಕೆ
author img

By

Published : Mar 29, 2022, 3:00 PM IST

ಬೆಳಗಾವಿ : ಬೆಳಗಾವಿ ಮಹಾನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿಗೆ ಹಾಹಾಕಾರ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅನಿಲ್ ಬೆನಕೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿರುವ ಎಲ್ ಅಂಡ್​ ಟಿ ಕಂಪನಿ ಮತ್ತು ಪಾಲಿಕೆ ಸಿಬ್ಬಂದಿ ಜೊತೆಗೆ ಶಾಸಕ ಅನಿಲ್ ಬೆನಕೆ ಚರ್ಚಿಸಿದರು. ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆಯ ಟೆಂಡರ್ ಎಲ್ ಅಂಡ್ ಟಿ ಕಂಪನಿ ಪಡೆದಿದೆ.

ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಎಲ್‌ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ಶಾಸಕ ಅನಿಲ್ ಬೆನಕೆ ಕ್ಲಾಸ್ ತೆಗೆದುಕೊಂಡರು. ನಗರದಲ್ಲಿ ನಿಯಮಿತವಾಗಿ ನೀರು ಪೂರೈಸದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ‌ನೀಡಿದರು.

ನಿಮ್ಮ‌ ತಪ್ಪು ಮುಚ್ಚಿಕೊಳ್ಳಲು ಕಾರಣ ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೆ ಟ್ಯಾಂಕರ್ ಮೂಲಕವಾದರೂ ಜನರಿಗೆ ನೀರು ಪೂರೈಸಬೇಕು. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.

ಓದಿ: ಜಲಾಶಯಗಳು ಭರ್ತಿಯಾಗಿದ್ದರೂ ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.