ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷಗಳ ಆಡಳಿತ ಅವಧಿಯಲ್ಲೇ ಗೋಮಾಂಸ ಅಧಿಕ ಪ್ರಮಾಣದಲ್ಲಿ ರಫ್ತಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.
ಗೋಕಾಕ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ನೋಡಿ ಮತಹಾಕಿ ಎಂದು ಸಂಸದ ಸುರೇಶ ಅಂಗಡಿ ಹೇಳುತ್ತಾರೆ. ಇದರಿಂದ ಅಂಗಡಿ ಸಾಧನೆ ಏನೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಸಲ ಸಂಸದ ಅಂಗಡಿ ಗೆದ್ದು ಬರಲು ಯಾವುದೇ ಅಲೆಯಿಲ್ಲ ಎಂದು ವ್ಯಂಗ್ಯವಾಡಿದರು.
ಜಾತಿ, ಧರ್ಮದ ಹೆಸರಲ್ಲಿ ಬಿಜೆಪಿಯವರು ಮತ ಕೇಳುತ್ತಾರೆ. ಮೋದಿ ಭರವಸೆ ನೀಡಿದ್ದಂತೆ ಅವರ ಸರ್ಕಾರದ ಅವಧಿಯಲ್ಲಿ ಕಪ್ಪು ಹಣ, ಬುಲೆಟ್ ಟ್ರೈನ್ ಬರಲೇ ಇಲ್ಲ. ಹೀಗಾಗಿ ಸುಳ್ಳು ಹೇಳುವ ಪ್ರಧಾನಿ ನಮಗೆ ಮತ್ತೊಮ್ಮೆ ಬೇಕಿಲ್ಲ. ಮೋದಿ ಹೆಸರಿನಿಂದ ಬಡವರ ಹೊಟ್ಟೆ ತುಂಬಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.