ಬೆಳಗಾವಿ : ಲೋಕಸಭಾ ಉಪಚುನಾವಣೆಗೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಯಾವುದೇ ರೀತಿಯ ಎಫೆಕ್ಟ್ ಆಗುವುದಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಓದಿ: ಎಲ್ಲಾ ಉಪಚುನಾಣೆಯಲ್ಲೂ ಗೆಲುವು ನಮ್ಮದೇ: ಲಕ್ಷ್ಮಣ್ ಸವದಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ಸತ್ಯಾಂಶ ಹೊರ ಬರಬೇಕೆಂದು ಎಸ್ಐಟಿ ನೇಮಕ ಮಾಡಿದ್ದೇವೆ. ತನಿಖೆ ಕೂಡ ನಡೆಯುತ್ತಿದೆ. ಈ ಚುನಾವಣೆಗೆ ರಮೇಶ್ ಸಿಡಿ ಪ್ರಕರಣ ಎಫೆಕ್ಟ್ ಆಗುವುದಿಲ್ಲ.
ಇದೀಗ ಮತದಾರರಲ್ಲಿ ಬೇರೆ ಬೇರೆ ಸಂಶಯ ಆರಂಭವಾಗಿದೆ. ಸಿಡಿ ಕ್ರಿಯೇಟ್ ಮಾಡಿದ್ದಾರೆ. ಷಡ್ಯಂತ್ರ ಮಾಡಿದ್ದಾರೆ ಅನ್ನೋ ಆಲೋಚನೆ ಶುರುವಾಗಿದೆ. ಮೋದಿಯವರ ಆಡಳಿತ, ಸುರೇಶ ಅಂಗಡಿಯವರ ಅಭಿವೃದ್ಧಿ ಕಾರ್ಯ ವೈಖರಿಗೆ ಜನ ಮತ ನೀಡಲಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ನಮ್ಮ ಶಾಸಕರು. ಅವರ ಜೊತೆಗೆ ನಾನು ಈಗಾಗಲೇ ಮಾತನಾಡಿದ್ದೇನೆ. ಅವರು ಚುನಾವಣೆ ಪ್ರಚಾರಕ್ಕೆ ಬರಬೇಕು ಅಂತಾ ಹೇಳಿದ್ದೇನೆ, ಪ್ರಚಾರಕ್ಕೆ ಜಾರಕಿಹೊಳಿ ಸಹೋದರರು ಬರುತ್ತಾರೆ ಎಂದರು.
ಪೂರ್ವಭಾವಿ ಸಭೆ : ರೈತರ ಪ್ರತಿಭಟನೆಯಿಂದ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಕಾಂಗ್ರೆಸ್‌ನವರು ರೈತರನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ರೈತ ವಿರೋಧಿ ಇದ್ದಿದ್ದರೆ ಇಡೀ ದೇಶದಲ್ಲಿ ಹೋರಾಟ ನಡೆಯುತ್ತಿತ್ತು.
ನಮ್ಮ ರಾಜ್ಯದಲ್ಲಿ ಕೃಷಿ ಮಸೂದೆಯನ್ನ ಒಪ್ಪಿಕೊಂಡಿದ್ದಾರೆ. ಕೃಷಿ ಮಸೂದೆಯಿಂದ ರೈತರಿಗೆ ಒಳ್ಳೆಯದಾಗುತ್ತದೆ. ಇದರಿಂದ ಮೋದಿಯವರ ಪಾಪ್ಯೂಲಾರಿಟಿ ಜಾಸ್ತಿಯಾಗುತ್ತಿದೆ ಎಂದರು.