ETV Bharat / city

ಸ್ವ್ಯಾಬ್ ​​ಪಡೆಯದೇ ವಾರ್ಡ್​ಗೆ ಶಿಫ್ಟ್, ಮೂರೇ ದಿನಕ್ಕೆ ಡಿಸ್ಚಾರ್ಜ್: ಬಿಮ್ಸ್​ನಲ್ಲಿ ಮತ್ತೊಂದು ಅವಾಂತರ

ಬಿಮ್ಸ್​ನ ಸಿಬ್ಬಂದಿ ಗಂಟಲು ದ್ರವ ಪಡೆಯದೇ ಕೊರೊನಾ ಸೋಂಕು ತಗುಲಿದೆ ಎಂದು ವ್ಯಕ್ತಿಯೊಬ್ಬನನ್ನು ಕೋವಿಡ್ ವಾರ್ಡ್​ಗೆ ಶಿಫ್ಟ್ ಮಾಡಿ, ಮೂರೇ ದಿನಕ್ಕೆ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

man shifted to covid ward without swab test in BIMS
ಬಿಮ್ಸ್​ ವಿರುದ್ಧ ಆರೋಪ
author img

By

Published : Jul 18, 2020, 1:48 PM IST

ಬೆಳಗಾವಿ: ಗಂಟಲು ದ್ರವ ಪಡೆಯದೇ ಕೊರೊನಾ ಸೋಂಕು ತಗುಲಿದೆ ಎಂದು ವ್ಯಕ್ತಿಯೊಬ್ಬನನ್ನು ಕೋವಿಡ್ ವಾರ್ಡ್​ಗೆ ಶಿಫ್ಟ್ ಮಾಡಿ ಜಿಲ್ಲಾಸ್ಪತ್ರೆಯ ವೈದ್ಯರು ಅವಾಂತರ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಮ್ಸ್​ ವಿರುದ್ಧ ಆರೋಪ

ಜಿಲ್ಲೆಯ ರಾಮತೀರ್ಥ ನಗರದ ನಿವಾಸಿಯನ್ನು ಬಿಮ್ಸ್​ನ ಕೋವಿಡ್ ವಾರ್ಡ್‌‌ಗೆ ಕರೆದೊಯ್ದು ಮೂರೇ ದಿನಕ್ಕೆ ಡಿಸ್ಚಾರ್ಜ್ ಮಾಡಲಾಗಿದೆ. ಗಂಟಲು ದ್ರವ ಪಡೆಯದೇ ಪಾಸಿಟಿವ್ ಬಂದಿದ್ದು ನಿಮಗೆ ಗೊತ್ತಾಗಿದ್ದು ಹೇಗೆ ಎಂದು ಯುವಕ ಪ್ರಶ್ನಿಸಿದ್ದಾರೆ. ಆದರೂ ವೈದ್ಯರು ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಬೆಳಗಾವಿ ಆರೋಗ್ಯ ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ಯುವಕ ಆತಂಕಕ್ಕೆ ಒಳಗಾಗಿದ್ದಾನೆ.

BIMS
ಡಿಸ್ಚಾರ್ಜ್​ ಪ್ರತಿ

ಜೂನ್ 10 ರಂದು ರಾಜಸ್ಥಾನದಿಂದ ಬಂದಿದ್ದ 32 ವರ್ಷದ ಈತನಿಗೆ ಕ್ವಾರಂಟೈನಲ್ಲಿರುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೇ ಜೂ.20 ರಂದು ಥ್ರೋಟ್ ಸ್ವ್ಯಾಬ್ ನೀಡಲು ವೈದ್ಯರು ಸೂಚಿಸಿದ್ದರು. ಆದ್ರೆ 20 ರಂದು ಥ್ರೋಟ್ ಸ್ವ್ಯಾಬ್ ನೀಡಲು ಹೋದಾಗ ದಿನಕ್ಕೆ 25 ಟೆಸ್ಟ್ ಮಾತ್ರ ಮಾಡ್ತೀವಿ, ನಾವು ಫೋನ್ ಮಾಡಿದಾಗ ಬನ್ನಿ ಎಂದಿದ್ದರು. ಇದಾದ 25 ದಿನಗಳ ಬಳಿಕ ಯುವಕನ ಮನೆಗೆ ಆ್ಯಂಬುಲೆನ್ಸ್ ಸಹಿತ ಹೋಗಿರುವ ಸಿಬ್ಬಂದಿ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿ ಕರೆತಂದು ಕೋವಿಡ್ ವಾರ್ಡ್‌ಗೆ ಶಿಫ್ಟ್ ಮಾಡಿದ್ದಾರೆ. ಮೂರು ದಿನಗಳ ಕಾಲ ವಾರ್ಡ್‌ನಲ್ಲಿಟ್ಟುಕೊಂಡು ನಿಮಗೆ ನೆಗೆಟಿವ್ ಬಂದಿದೆ ಎಂದು ನಿನ್ನೆ ಸಂಜೆ ಡಿಸ್ಚಾರ್ಜ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.