ಗೋಕಾಕ್: ಇಲ್ಲಿನ ಮಹದೆಪ್ಪ ಮುನವಳ್ಳಿ ಕೆ.ಎಲ್.ಇ ಶಾಲೆಯಲ್ಲಿ ನಡೆದ ಲಿಂಗಾಯತರ ಸಭೆಯಲ್ಲಿ ಸಮುದಾಯದ ಮುಖಂಡರು, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿಗೆ ಬೆಂಬಲ ನೀಡುವಂತೆ ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ, ಮಹಾಂತೇಶ ಕವಟಗಿಮಠ, ಶಾಸಕರಾದ ವಿಶ್ವನಾಥ ಪಾಟೀಲ್, ಎ.ಎಸ್.ಪಾಟೀಲ್ ನಡಹಳ್ಳಿ ಅವರು ಲಿಂಗಾಯತರ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಲಿಂಗಾಯತ ಸಮುದಾಯದ ಮುಖಂಡರು,ರಮೇಶ್ ಜಾರಕಿಹೊಳಿ ಅವರನ್ನ ಬೆಂಬಲಿಸುವುದಿಲ್ಲ. 30 ವರ್ಷದಿಂದ ನಮ್ಮ ಸಮಾಜವನ್ನ ರಮೇಶ ಜಾರಕಿಹೊಳಿ ತುಳಿದಿದ್ದಾರೆ. ಈಗ ನೀವು ಬಂದು ಅವರಿಗೇ ಮತ ನೀಡುವಂತೆ ಹೇಳ್ತಿದ್ದರಿ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಲಿಂಗಾಯತ ಮುಖಂಡರು ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಲಿಂಗಾಯತ ಮುಖಂಡ ಪ್ರಕಾಶ ಬಾಗೋಜಿ ಅವರು, ಸುರೇಶ ಅಂಗಡಿ ಅವರ ಕಾಲಿಗೆ ಬಿದ್ದು ದಯವಿಟ್ಟು ಸಮಾಜದ ಮೇಲೆ ಒತ್ತಡ ಹಾಕಬೇಡಿ ಎಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಪ್ರಕಾಶ ಬಾಗೋಜಿ, ರಮೇಶ್ ಜಾರಕಿಹೊಳಿಗೆ ಬೆಂಬಲಿಸುವಂತೆ ನಮ್ಮ ಸಮಾಜದ ಮೇಲೆ ಒತ್ತಡ ಹಾಕಬೇಡಿ ಎಂದು ಬೇಡಿಕೊಂಡರು.