ಬೆಳಗಾವಿ : ಲಖನ್ ಜಾರಕಿಹೊಳಿ ಪಕ್ಷ ಸೇರ್ಪಡೆ ವಿಚಾರ ಅಥವಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಯಾರು ಕೆಲಸ ಮಾಡಿಲ್ಲ? ನಮ್ಮ ಅಭ್ಯರ್ಥಿಯ ಓವರ್ ಕಾನ್ಫಿಡೆನ್ಸ್‌ನಿಂದ ಸೋಲಾಗಿದೆಯೇ? ಏನು ಆಗಿದೆ ಎಂಬ ವರದಿ ಮೇಲೆ ತೀರ್ಮಾನ ಮಾಡುತ್ತೇವೆ ಎಂದರು.
ಪರಿಷತ್ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ತಲುಪಿದ್ದೇವೆ. ನಾವು ಸ್ಥಾನ ಕಳೆದುಕೊಂಡಿಲ್ಲ. ನಮಗೆ ಬಹುಮತ ಬಂದಿದೆ. ಮೇನಲ್ಲಿ ಚುನಾವಣೆ ಇದೆ. ಕಾಂಗ್ರೆಸ್ ಸೋತು ಮಣ್ಣು ಮುಕ್ಕಿದೆ. ಬೆಂಗಳೂರಿನಲ್ಲಿ ಫಸ್ಟ್ ಟೈಮ್ ಕಾಂಗ್ರೆಸ್‌ನವರು ಸೋತಿದ್ದಾರೆ. ಬೆಳಗಾವಿ, ಮೈಸೂರಿನಲ್ಲಿ ನಾವು ಸೋತಿದ್ದೇವೆ ಎಂದು ಆರ್ ಅಶೋಕ್ ಹೇಳಿದರು.
ರಮೇಶ್ ಜಾರಕಿಹೊಳಿ ಬಗ್ಗೆ ಹೈಕಮಾಂಡ್ ಕ್ರಮಕೈಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಹೇಳಿಕೆ ನೀಡಿದ್ದರು. ಇಂದು ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರ್.ಅಶೋಕ್ ಅವರು ಅದು ಸಿಎಂಗೆ ಬಿಟ್ಟ ವಿಚಾರ ಎಂದಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಮೆ ಸ್ಥಾಪನೆ : ಮುಲಾಜಿಲ್ಲದೆ ತೆರವು ಮಾಡಲು ಹೈಕೋರ್ಟ್ ಸೂಚನೆ