ETV Bharat / city

ಬೃಹತ್ ಬಂಡೆಯಲ್ಲಿ ಉದ್ಭವಿಸುತ್ತಿದ್ದಾಳೆ ದುರ್ಗೆ; ಬೆಳಗಾವಿಯ ಐತಿಹಾಸಿಕ ಸ್ಥಳದಲ್ಲಿ ಪವಾಡ

author img

By

Published : Aug 15, 2020, 3:00 PM IST

ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಹೊರವಲಯದ ಆನಂದಗಡದಲ್ಲಿರುವ ಬೃಹತ್​​ ಬಂಡೆಯೊಂದರಲ್ಲಿ ದುರ್ಗಾಮಾತೆ ಉದ್ಭವಗೊಂಡಿದ್ದಾಳೆ. ಇದು ಇಲ್ಲಿನ ಜನರ ಅಚ್ಚರಿಗೆ ಕಾರಣವಾಗಿದೆ.

Durga
ದುರ್ಗಾಮಾತೆ

ಬೆಳಗಾವಿ: ಬೃಹತ್ ಬಂಡೆಯ ಮೇಲೆ ಶಕ್ತಿದೇವತೆ ದುರ್ಗೆ ಉದ್ಭವಿಸುತ್ತಿದ್ದಾಳೆ. ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಹೊರವಲಯದ ಆನಂದಗಡ ಈ ಪವಾಡಕ್ಕೆ ಸಾಕ್ಷಿಯಾಗಿದೆ.

ಬಂಡೆಯಲ್ಲಿ ದುರ್ಗಾಮಾತೆ ದಿನದಿಂದ ದಿನಕ್ಕೆ ಮೂರ್ತಿಯ ಸ್ವರೂಪ ಪಡೆಯುತ್ತಿದ್ದಾಳೆ. ಈ ಮೂರ್ತಿ ಇದೀಗ ಗ್ರಾಮಸ್ಥ ಅಚ್ಚರಿಗೆ ಕಾರಣವಾಗಿದೆ. ದುರ್ಗಾಮಾತೆಯ ಮೂರ್ತಿಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೂ ನಂಟಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಬಂಡೆಯ ಮೇಲೆ ಆರಂಭದಲ್ಲಿ ಕಿರೀಟ ನಂತರ ಹಣೆ, ಕಣ್ಣು, ಮೂಗು, ಬಾಯಿ ಮೂಡಿದೆ. ದಿನಕಳೆದಂತೆ ದುರ್ಗೆಯ ಮೂರ್ತಿ ಕಾಣಲು ಆರಂಭವಾಗಿದೆ. ಸ್ಥಳೀಯರು ಈ ವಿಶೇಷವನ್ನು ಗಮನಿಸಿ ದೇವಾಲಯ ನಿರ್ಮಿಸಿದ್ದಾರೆ. ಸದ್ಯ ಶೇ.80ರಷ್ಟು ಮೂರ್ತಿ ಬಂಡೆ ಮೇಲೆ ಅರಳಿದೆ. ನವರಾತ್ರಿ ಸಮಯದಲ್ಲಿ ಇಲ್ಲಿ 9 ದಿನ ದೊಡ್ಡ ಜಾತ್ರೆ ನಡೆಯುತ್ತದೆ. ಸ್ವಯಂಪ್ರೇರಿತವಾಗಿ ಉದ್ಭವಿಸುತ್ತಿರುವ ದೇವಿಯನ್ನು ನಂದಗಡ ಗ್ರಾಮಸ್ಥರು ನಿತ್ಯ ಪೂಜಿಸಿ ಆರಾಧಿಸುತ್ತಾರೆ.

ಮೂರ್ತಿಗೂ, ರಾಯಣ್ಣನಿಗೂ ಇದೆ ನಂಟು

ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮಳನ್ನು‌ ಬ್ರಿಟಿಷರು ಬಂಧಿಸಿ ಸಂಸ್ಥಾನವನ್ನು ವಶಕ್ಕೆ ಪಡೆಯುತ್ತಾರೆ. ಅವರಿಂದ ಸಂಸ್ಥಾನವನ್ನು ಮರಳಿ ವಶಕ್ಕೆ ಪಡೆದು, ಚೆನ್ನಮ್ಮಳಿಗೆ ಮತ್ತೆ ಪಟ್ಟಾಭಿಷೇಕ ಮಾಡಬೇಕು ಎಂಬುದು ಆಕೆಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಕನಸಾಗಿರುತ್ತದೆ. ಈ ಕಾರಣಕ್ಕೆ ಆಗ ರಾಯಣ್ಣ ನಂದಗಡಕ್ಕೆ ಬಂದು ಇದೇ ಆನಂದಗಡದಲ್ಲಿ ತನ್ನ ಸೈನಿಕರಿಗೆ ತರಬೇತಿ ನೀಡುತ್ತಿದ್ದನಂತೆ. ಈ ಸಂಬಂಧ ಸಾಕಷ್ಟು ಕುರುಹುಗಳು ಆನಂದಗಡದಲ್ಲಿವೆ.

ಬಲಭಾಗದಲ್ಲಿ ಅಚ್ಚರಿಗೆ ಕಾರಣವಾದ ದುರ್ಗಾಮಾತೆಯ ದೃಶ್ಯಾವಳಿ, ಎಡಭಾಗದಲ್ಲಿ ಜನರ ಅಭಿಪ್ರಾಯ

ಅತಿ ಎತ್ತರದ ಗುಡ್ಡ ಇದಾದ ಕಾರಣ ಬ್ರಿಟಿಷರ ಚಲನವಲನಗಳನ್ನು ಗಮನಿಸಬಹುದು ಎಂಬ ಕಾರಣಕ್ಕೆ ಈ ಗುಡ್ಡವನ್ನು ಆತ ಆಯ್ಕೆ ಮಾಡಿಕೊಂಡಿದ್ದನಂತೆ. ಗೆರಿಲ್ಲಾ ಯುದ್ಧದ ತಂತ್ರವನ್ನು ರಾಯಣ್ಣ ಹೆಣೆದಿದ್ದು ಇದೇ ಆನಂದಗಡದಲ್ಲಿ ಎಂಬ ಇತಿಹಾಸವೂ ಇದೆ. ದುರ್ಗೆಯನ್ನು ಆರಾಧಿಸುತ್ತಿದ್ದ ರಾಯಣ್ಣ ಬಂಡೆಗೆ ನಿತ್ಯ ಪೂಜೆ ಸಲ್ಲಿಸುತ್ತಿದ್ದನಂತೆ. ಇದೀಗ ಬಂಡೆ ಮೇಲೆಯೇ ದುರ್ಗಾಮಾತೆಯ ಮೂರ್ತಿ ಮೂಡುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಬಂಡೆಯ ಮೇಲೆ ದುರ್ಗೆ ಉದ್ಭವವಾಗುತ್ತಿದ್ದು, ರಾಯಣ್ಣ ಮತ್ತೊಮ್ಮೆ ಹುಟ್ಟಿ ಬರಲಿದ್ದಾರೆ ಎಂಬುವುದು ಸ್ಥಳೀಯರ ನಂಬಿಕೆ.

Godess Durga
ದುರ್ಗಾಮಾತೆಗೆ ದೇವಸ್ಥಾನ ನಿರ್ಮಿಸಿರುವುದು

ರಾಯಣ್ಣ ನಂದಗಡ ಆಯ್ದುಕೊಂಡಿದ್ದೇಕೆ?

ನಂದಗಡ ಆಗ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಮುತ್ತು, ರತ್ನ, ಹವಳ ಮಾರಾಟ ಮಾಡಲಾಗುತ್ತಿತ್ತು. ರಾಯಣ್ಣನ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದ ನಂದಗಡದ ಜನರು ಸಾಕಷ್ಟು ‌ಆರ್ಥಿಕ ನೆರವು ನೀಡುತ್ತಿದ್ದರು. ಈ ಕಾರಣಕ್ಕೆ ಬ್ರಿಟಿಷರ ವಿರುದ್ಧ ಹೋರಾಡಲು ಸೈನ್ಯ ಸಜ್ಜುಗೊಳಿಸಲು ರಾಯಣ್ಣ ನಂದಗಡ ಆಯ್ದುಕೊಂಡಿದ್ದನು. ರಾಯಣ್ಣನ ಹುಟ್ಟೂರು ಸಂಗೊಳ್ಳಿ ಆದರೂ, ಆತನ ಸಮಾಧಿ ಇರುವುದು ನಂದಗಡದಲ್ಲಿ. ನಂದಗಡದಲ್ಲೇ ನನ್ನ ಸಮಾಧಿ ಆಗಬೇಕು ಎಂಬುವುದು ಆತನ ಇಚ್ಛೆಯೂ ಆಗಿತ್ತು ಎಂದು ಸ್ಥಳೀಯ ಮುಖಂಡ ‌ಶಂಕರ್ ಸೋನಾಲಿ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಎಲ್ಲಿದೆ ಈ ಆನಂದಗಡ?

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಹೊರವಲಯದಲ್ಲಿ ಆನಂದಗಡವಿದೆ. ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ನಂದಗಡ ಕೋಟೆಯಿದೆ. ಇಲ್ಲಿಂದ 8 ಕಿಮೀ ದೂರವಿರುವ ಈ ದೇವಸ್ಥಾನಕ್ಕೆ ಟ್ರ್ಯಾಕ್ಟರ್, ಬೈಕ್​ ಇಲ್ಲವೇ, ಕಾಲ್ನಡಿಗೆಯಲ್ಲಿಯೇ ಹೋಗಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.