ETV Bharat / city

ವಿಧಾನಸಭೆ ಚುನಾವಣೆ: ಗೋವಾ ಕನ್ನಡಿಗರ ಮತ ಬೇಟೆಗೆ ಸಿ.ಟಿ.ರವಿ ಕಸರತ್ತು - BJP plans to get vote for Goa Kannadigas

ಇದೇ ವೇಳೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸಹ ಉಪಸ್ಥಿತರಿದ್ದರು. ಗೋವಾದ ವಾಸ್ಕೋದಲ್ಲಿ 'ಕನ್ನಡ ಭವನ' ಸ್ಥಾಪಿಸಲು ಕನ್ನಡಪರ ಸಂಘಟನೆಗಳು ಮನವಿ ಸಲ್ಲಿಸಿದರು‌. ಕನ್ನಡ ಸಂಘಟನೆಗಳ ಮನವಿ ಈಡೇರಿಸುವುದಾಗಿ ಸಿ.ಟಿ.ರವಿ ಭರವಸೆ ನೀಡಿದರು.

goa-election
ಸಿ.ಟಿ. ರವಿ ಕಸರತ್ತು
author img

By

Published : Jan 14, 2022, 3:57 PM IST

ಬೆಳಗಾವಿ: ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಕ‌ನ್ನಡಿಗರ ಮತ ಸೆಳೆಯಲು ಬಿಜೆಪಿ ಕಸರತ್ತು ಆರಂಭಿಸಿದೆ. ಗೋವಾದಲ್ಲಿರುವ ಮೂರು ಲಕ್ಷಕ್ಕೂ ಅಧಿಕ ಕನ್ನಡಿಗರ ಮತ ಸೆಳೆಯಲು ಬಿಜೆಪಿ ಗೋವಾ ಉಸ್ತುವಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಜವಾಬ್ದಾರಿ ಹೊತ್ತಿದ್ದಾರೆ.

ಚುನಾವಣೆ ‌ಹಿನ್ನೆಲೆಯಲ್ಲಿ ಗೋವಾ ಭೇಟಿ ನೀಡಿದ ಸಿ.ಟಿ.ರವಿ, ಗೋವಾ ಕನ್ನಡಪರ ಸಂಘಟನೆಗಳ ಮುಖಂಡರ ಜೊತೆಗೆ ಸಭೆ ನಡೆಸಿದರು. ಪಣಜಿಯ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಕನ್ನಡ ಸಂಘಟ‌‌ನೆ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕನ್ನಡ ಭವನ ನಿರ್ಮಾಣದ ಭರವಸೆ

ಇದೇ ವೇಳೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸಹ ಉಪಸ್ಥಿತರಿದ್ದರು. ಗೋವಾದ ವಾಸ್ಕೋದಲ್ಲಿ 'ಕನ್ನಡ ಭವನ' ಸ್ಥಾಪಿಸಲು ಕನ್ನಡಪರ ಸಂಘಟನೆಗಳು ಮನವಿ ಸಲ್ಲಿಸಿದರು‌. ಕನ್ನಡ ಸಂಘಟನೆಗಳ ಮನವಿ ಈಡೇರಿಸುವುದಾಗಿ ಸಿ.ಟಿ.ರವಿ ಭರವಸೆ ನೀಡಿದರು.

ಬಳಿಕ ಮಾತನಾಡಿದ ಸಿ.ಟಿ.ರವಿ, ಗೋವಾ ಬಿಜೆಪಿ ಪ್ರಭಾರಿಯಾಗಿ ಅವಕಾಶ ಸಿಕ್ಕಿರುವುದರಿಂದ ನನಗೆ ಬಲ ಕೊಡಬೇಕು. ಇಲ್ಲಿನ ಕನ್ನಡಿಗರಿಗೆ ಶಕ್ತಿ ತುಂಬುವ ಕೆಲಸವನ್ನು ನಾನು ಮಾಡುತ್ತೇನೆ. ಕನ್ನಡ ಭವನ ನಿರ್ಮಾಣಕ್ಕೆ ಸಿಎಂ 10 ಕೋಟಿ ಘೋಷಣೆ ಮಾಡಿದ್ದಾರೆ. ಬಿರ್ಲಾ ಗ್ರೂಪಿನ ಸ್ಥಳ ಕೊಡಿಸುವುದಾಗಿ ದೇವೇಂದ್ರ ಫಡ್ನವೀಸ್ ಭರವಸೆ ನೀಡಿದ್ದಾರೆ. ಎಲ್ಲ ಕನ್ನಡಿಗರು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಕೋವಿಡ್‌ ನಿಯಮ ಗಾಳಿಗೆ ತೂರಿ ಸಮಾಜವಾದಿ ಪಕ್ಷದಿಂದ ಬೃಹತ್‌ ಪಕ್ಷ ಸೇರ್ಪಡೆ ಕಾರ್ಯಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.