ETV Bharat / city

ಚಿಕ್ಕೋಡಿಯಲ್ಲಿ ತಂದೆಯ ಮರಣದಿಂದ ಆಘಾತಗೊಂಡ ಮಗನೂ ಇಹಲೋಕ ತ್ಯಜಿಸಿದ!

ತಂದೆಯ ಮರಣದ ಸುದ್ದಿ ಕೇಳಿ ಮಗನೂ ಸಹ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿ ಕೆ ಗ್ರಾಮದಲ್ಲಿ ನಡೆದಿದೆ.

ಸಾವಿನಲ್ಲೂ ಒಂದಾದ ಅಪ್ಪ-ಮಗ
author img

By

Published : Sep 18, 2019, 8:17 PM IST

ಚಿಕ್ಕೋಡಿ: ತಂದೆಯ ಮರಣದ ಸುದ್ದಿ ಕೇಳಿ ಮಗನೂ ಸಹ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿ ಕೆ ಗ್ರಾಮದಲ್ಲಿ ನಡೆದಿದೆ.

ಕಳೆದೆರಡು ದಿನಗಳ‌ ಹಿಂದಷ್ಟೇ ಕರಿಮಸಾಬ ಕಾಸಾರ (72) ಮರಣ ಹೊಂದಿದ್ದರು. ತಂದೆಯ ಸಾವು ಮಗನಿಗೆ ತೀವ್ರ ದುಃಖ ಉಂಟು ಮಾಡಿದ್ದು, ಗೌಸ್ ಕಾಸಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಕೆಲಸಕ್ಕೆಂದು ಗೌಸ್ ಕಾಸಾರ ತೆರಳಿದ ಸಂದರ್ಭದಲ್ಲಿ ಆತನ ತಂದೆ ಸ್ವಗೃಹದಲ್ಲಿ ಮೃತಪಟ್ಟ ಘಟನೆ ನಡೆದಿತ್ತು. ತಂದೆ ಮರಣಿಸಿದ ಸುದ್ದಿ ಕೇಳಿ ಮಗ ಆಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾನೆ. ತಂದೆ,ಮಗನ ಸಾವಿನಿಂದ ಕುಟುಂಬ ಆಘಾತಕ್ಕೊಳಗಾಗಿದೆ.

ಈ ಸಾವಿನ ಸುದ್ದಿ ತಿಳಿದು ಸುತ್ತ ಮುತ್ತಲಿನ ಗ್ರಾಮಸ್ಥರು, ಬಂಧು ಬಳಗ, ಹಾಗು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಸುಪುತ್ರ ಚಿದಾನಂದ ಸವದಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ, ಸಹಕಾರಿ ಧುರೀಣ ಕಾಶೀನಾಥ ಸವದಿ ಸೇರಿದಂತೆ ಹಲವು ಮುಖಂಡರು ಬಂದು ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಇಸ್ಲಾಂ ಧರ್ಮದ ಪದ್ದತಿಯಂತೆ ಖಬರಸ್ಥಾನದಲ್ಲಿ ತಂದೆ-ಮಗನ ಶವ ಸಂಸ್ಕಾರ ನೆರವೇರಿಸಲಾಗಿದೆ.

Intro:ಸಾವಿನಲ್ಲೂ ಒಂದಾದ ಅಪ್ಪ-ಮಗ
Body:
ಚಿಕ್ಕೋಡಿ :
ಸ್ಟೋರಿ

ಆಧುನಿಕ ಜಗತ್ತಿನಲ್ಲಿ ಗುರು-ಹಿರಿಯರಿಗೆ ಗೌರವ ಕೊಡುವ ಪರಂಪರೆ ನಶಿಸಿ ಹೋಗುತ್ತಿದೆ. ತಂದೆ ಮಕ್ಕಳ ನಡುವೆ ಸಾಮರಸ್ಯತೆಯೂ ಸಂಪೂರ್ಣ ನಶಿಸಿ ಹೋಗಿ ಮನೆಗಳು ಕುರುಕ್ಷೇತ್ರಗಳಾಗುತ್ತಿವೆ. ಇವೆಲ್ಲವುಗಳ ಮದ್ಯದಲ್ಲಿ ಶ್ರವಣಕುಮಾರನ ಪಿತೃಭಕ್ತಿ ಇಂದಿನ ಯುವ ಜನಾಂಗಕ್ಕೆ ಡಾಂಬಿಕವೆನಿಸುತ್ತತಿರುವುದು ಸಹಜ. ಆದರೆ, ಇದು ಸತ್ಯ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿಕೆ ಗ್ರಾಮದ ಮುಸ್ಲಿಂ ಸಮಾಜದ ಕರಿಮಸಾಬ ಬಾಬಾಲಾಲ ಕಾಸಾರ ಹಾಗೂ ಮಗ ಗೌಸ ಕಾಸಾರ ಈ ತಂದೆ ಮಗನ ನಡುವಿನ ಬಾಧವ್ಯವು ಅಧುನಿಕ ಯುವಕರಿಗೆ ಮಾದರಿಯಾಗಿದೆ.

ಕಳೆದೆರಡು ದಿನಗಳ‌ ಹಿಂದಷ್ಟೆ ಕರಿಮಸಾಬ ಕಾಸಾರ(72) ವರ್ಷ ವಯಸ್ಸಾಗಿದ್ದು, ಆತ ಮರಣ ಹೊಂದಿದ್ದಾನೆ. ತಂದೆಯ ಮರಣವು ಮಗನಿಗೆ ಭರಿಸಲಾರದ ದುಖ:ವನ್ನು ಉಂಟು ಮಾಡಿದ್ದು ತಂದೆಯ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಕಿತ್ತು ತಿನ್ನುವ ಬಡತನ, ಹೆಂಡಿರು ಮಕ್ಕಳನ್ನು ಸಲುಹಲು ದುಡಿಮೆಯೇ ಇತನಿಗೆ ಆಧಾರ. ಇತ್ತೀಚಿಗೆ ಪ್ರವಾಹ ಬಂದು ಮನೆ ನೀರಿನಿಂದ ಬಿದ್ದು ಹೋಗಿದೆ. ಇಂಥದರಲ್ಲಿ ಜೀವನ ಸಾಗಿಸುತ್ತಿರುವ ಗೌಸ್ ಕಾಸಾರ ಬೇರೆಯವರಲ್ಲಿ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಆತನ ತಂದೆ ಮನೆಯಲ್ಲಿ ಸಾವನ್ನಪ್ಪಿದ್ದಾನೆ. ಆತನ ತಂದೆಯ ಮರಣದ ವಾರ್ತೆಯನ್ನು ಕೇಳಿ ಒಂದು ಗಂಟೆಯಲ್ಲಿಯೇ ಆಘಾತಕ್ಕೆ ಒಳಗಾಗಿ ಮರಣ ಹೊಂದಿರುವುದು ಸುತ್ತಲಿನ ಗ್ರಾಮಸ್ಥರಿಗೆ ತುಂಬಲಾರದ ನೋವನ್ನುಂಟು ಮಾಡಿದೆ.

ಇದರೊಂದಿಗೆ ಆತನ ಪಿತೃ ಭಕ್ತಿಯ ಬಗ್ಗೆ ಜನರಲ್ಲಿ ತುಂಬ ಅಭಿಮಾನವೂ ಮೂಡಿದೆ. ತಂದೆ ಮಗನ ಸಾವಿನ ಸುದ್ದಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹರಡುತ್ತಿದ್ದಂತೆ ಅವರ ಅಪಾರ ಬಂಧು ಬಳಗ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಸುಪುತ್ರ ಚಿದಾನಂದ ಸವದಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ, ಸಹಕಾರಿ ಧುರೀಣ ಕಾಶೀನಾಥ ಸವದಿ ಸೇರಿದಂತೆ ಹಲವಾರು ಮುಖಂಡರು ಬಂದು ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ನಂತರ ಮುಸ್ಲಿಂ ಸಮಾಜದ ಪದ್ದತಿಯಂತೆ ಖಬರಸ್ಥಾನದಲ್ಲಿ ಅಕ್ಕ-ಪಕ್ಕ ತಂದೆ ಮಗನ ಶವ ಸಂಸ್ಕಾರ ನೆರವೇರಿಸಿದರು 

ಇಂತಹ ಘಟನೆ ನಡೆದಿದ್ದು ಪಿತೃ ವಾತ್ಸಲಕ್ಕೆ ಸುತ್ತ ಮುತ್ತಲಿನ ಗ್ರಾಮದ ಯುವಕರಿಗೆ ಗೌಸ ಕಾಸಾರ ಮಾದರಿಯಾಗಿ ಸಾವನಪ್ಪಿದ್ದು ಎಲ್ಲರ ಕಣ್ಣಲ್ಲೂ ನೀರು ತಂದಿದೆ ಈ ಅಪ್ಪ - ಮಕ್ಕಳ ಸಾವು

ಪೋಟೋ 1 : ಕರಿಮಸಾಬ ಕಾಸಾರ - ತಂದೆ

ಪೋಟೋ 2 : ಗೌಸ ಕಾಸಾರ - ಮಗ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.