ETV Bharat / city

ಬೆಳಗಾವಿ: ಗಾಂಜಾ ವ್ಯಸನಿಗಳಿಂದ ಯುವಕನ ಮೇಲೆ‌ ಮಾರಣಾಂತಿಕ ಹಲ್ಲೆ - Fatal assault on a youth by marijuana addicts

ಬೆಳಗಾವಿಯ ನ್ಯೂ ಗಾಂಧಿ ನಗರದಲ್ಲಿ ಗಾಂಜಾ ವ್ಯಸನಿ ಯುವಕರ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಯುವಕನ ಮೇಲೆ‌ ಮಾರಣಾಂತಿಕ ಹಲ್ಲೆ
ಯುವಕನ ಮೇಲೆ‌ ಮಾರಣಾಂತಿಕ ಹಲ್ಲೆ
author img

By

Published : Feb 18, 2022, 9:21 AM IST

ಬೆಳಗಾವಿ: ​ಗ್ಯಾರೇಜ್ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ಯುವಕನ ಮೇಲೆ ಗಾಂಜಾ ವ್ಯಸನಿ ಯುವಕರ ಗ್ಯಾಂಗ್​ ತಲವಾರ್ ಮತ್ತು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನ್ಯೂ ಗಾಂಧಿ ನಗರದಲ್ಲಿ ನಡೆದಿದೆ.

ನ್ಯೂ ಗಾಂಧಿನಗರ ನಿವಾಸಿ ಮೆಕ್ಯಾನಿಕ್ ಕೈಫ್ ತನ್ವೀರ್ ಬಾಗವಾನ್ (20) ಎಂಬಾತನ ಮೇಲೆ ಐದಾರು ಯುವಕರ ಗುಂಪು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದು, ಆತನ ಕೈ ಹಾಗೂ ಬೆನ್ನಿಗೆ ಗಾಯವಾಗಿದೆ. ಗಾಯಾಳುವನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ಮುಸ್ತಾಕ್ ದೇವಲಾಪುರೆ ಎಂಬ ವ್ಯಕ್ತಿ ಹಾಗೂ ಈತನ ಸಹಚರರು ಗಾಂಜಾ ಮತ್ತಿನಲ್ಲಿ ಹಲ್ಲೆ ಮಾಡಿದ್ದಾರೆ‌ ಎಂದು ಕೈಫ್​ ಸಂಬಂಧಿಕರು ಆರೋಪಿಸಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.