ಅಥಣಿ(ಬೆಳಗಾವಿ): ತಾಲೂಕಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪ, ಉದ್ಯೋಗ ಖಾತರಿ ಯೋಜನೆ ಅಡಿ ತಾಲೂಕಿನ ಎಲ್ಲ ಗ್ರಾಮಗಳ ಕಾರ್ಮಿಕರಿಗೆ, ಕೃಷಿಹೊಂಡ, ಕೆರೆ ಹೂಳೆತ್ತುವುದು, ಬದು ನಿರ್ಮಾಣ ಸೇರಿದಂತೆ ವಿವಿಧ ಕೆಲಸ ನೀಡಲಾಗುತ್ತಿದೆ. ಇದರ ಉಪಯೋಗವನ್ನ ಎಲ್ಲರೂ ಪಡೆಯಬೇಕು. ಇನ್ನು,ಅಥಣಿ ತಾಲೂಕಿಗೆ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಮರಳಿದ್ದು, ಅವರಿಗೆ ಜಾಬ್ ಕಾರ್ಡ್ ನೀಡುವ ಮೂಲಕ ಉದ್ಯೋಗ ಕಲ್ಪಿಸಿ,ಜೀವನ ನೀರ್ವಹಣೆಗೆ ಅನುಕೂಲ ಕಲ್ಪಿಸಲಾಗುವದು ಎಂದರು.
ಇನ್ನು,ಗ್ರಾಮಿಣ ಭಾಗದಲ್ಲಿ ಮಹಿಳೆ ಮತ್ತು ಪುರುಷ ಕೂಲಿ ಕಾರ್ಮಿಕರಿಗೆ ಸಮಾನ ವೇತನ ಅಂದರೆ 275 ರೂಪಾಯಿ ನಿಗದಿಪಡಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಆದೇಶದ ಮೇರೆಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಪ್ರಚಾರದ ವಾಹನ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದರು.