ETV Bharat / city

ಚುನಾವಣೆ ನಂತರ ಒಂದೇ ವಾರಕ್ಕೆ ರಮೇಶ್​ ಜಾರಕಿಹೊಳಿ‌ ಬಿಜೆಪಿ ತೊರೆಯಲಿದ್ದಾರೆ: ಗುಂಡೂರಾವ್ ಭವಿಷ್ಯ

ಮೈತ್ರಿ ಸರ್ಕಾರ ಉರಳಿಸಿ,ಬಿಜೆಪಿ ಸೇರ್ಪಡೆ ಆಗಿರುವ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ‌ ಚುನಾವಣೆ ನಂತರ ಒಂದೇ ವಾರಕ್ಕೆ ಪಕ್ಷ ತೊರೆಯಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಹೇಳಿದ್ದಾರೆ.

dinesh gundurao pressmeet
ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್
author img

By

Published : Nov 27, 2019, 1:57 PM IST

Updated : Nov 27, 2019, 2:51 PM IST

ಗೋಕಾಕ್​: ಮೈತ್ರಿ ಸರ್ಕಾರ ಉರಳಿಸಿ, ಬಿಜೆಪಿ ಸೇರ್ಪಡೆ ಆಗಿರುವ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ‌ ಚುನಾವಣೆ ನಂತರ ಒಂದೇ ವಾರಕ್ಕೆ ಪಕ್ಷ ತೊರೆಯಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಹೇಳಿದ್ದಾರೆ.

ಚುನಾವಣೆ ನಂತರ ಒಂದೇ ವಾರಕ್ಕೆ ರಮೇಶ್​ ಜಾರಕಿಹೊಳಿ‌ ಬಿಜೆಪಿ ತೊರೆಯಲಿದ್ದಾರೆ: ಗುಂಡೂರಾವ್ ಭವಿಷ್ಯ

ಗೋಕಾಕ್​ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಒಂದು ವಾರದಲ್ಲೇ ಬಿಜೆಪಿ ಬಿಟ್ಟು ಹೊರ ಬರ್ತಾರೆ. ಈಗಾಗಲೇ ರಮೇಶ್​ಗೆ ಕಾಂಗ್ರೆಸ್ ಬಾಗಿಲು ಮುಚ್ಚಿದೆ. ಅವರೀಗ ಬಿಜೆಪಿಯಲ್ಲಿ ಇರಲು ಆಗಲ್ಲ. ಜೆಡಿಎಸ್ ಪಕ್ಷಕ್ಕೆ ಸೇರಲೂ ಆಗಲ್ಲ. ಹೀಗಾಗಿ ತಮ್ಮದೇ ಒಂದು‌ ಪಕ್ಷ ಕಟ್ಟಿಕೊಳ್ಳಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು.

ರಮೇಶ್ ಜಾರಕಿಹೊಳಿ‌ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ತಮ್ಮ ಕಾಲಾವಧಿಯಲ್ಲಿ ರಾಜ್ಯಕ್ಕಾಗಿ‌ ಏನು ಕೆಲಸ ಮಾಡಿದ್ದೇನೆ ಅಂತಾ ಹೇಳಿದ್ದಾರಾ? ಮಂತ್ರಿ‌ ಆದಾಗ ಅವರು,ಯಾವ ಜಿಲ್ಲೆಗೂ ಹೋಗಿಲ್ಲ. ಸ್ವಂತ ಜಿಲ್ಲೆಯಲ್ಲೂ ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಅವಕಾಶ ಸಿಕ್ಕಾಗ ಜನರಿಗೆ ಏನೂ ಮಾಡದಿದ್ರೆ,ಸಚಿವನಾಗಿ ಪ್ರಯೋಜನವೇನು. ನಾಳೆ ಇವರು ಡಿಸಿಎಂ,ಸಿಎಂ,ಪ್ರಧಾನಿ ಆದರೆ ಏನು ಪ್ರಯೋಜನ?. ಸ್ವಾರ್ಥ,ಲಾಭಕ್ಕಾಗಿ ರಮೇಶ್ ಡಿಸಿಎಂ ಆಗಲು ಹೋಗುತ್ತಿದ್ದಾರೆ. ಇಂತಹ ಅಭ್ಯರ್ಥಿಯನ್ನು ಜನರು ತಿರಸ್ಕರಿಸಬೇಕು ಎಂದು ಮನವಿ ಮಾಡಿಕೊಂಡರು.

ಇನ್ನು,ಬೆಳಗಾವಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದಾರೆ. ಕಳೆದ ನಾಲ್ಕೈದು ತಿಂಗಳಿಂದ ಗೋಕಾಕ್​ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ. ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಮಂತ್ರಿ ಆಗಬೇಕು, ಉಪಮುಖ್ಯಮಂತ್ರಿ ಆಗಬೇಕು,ದುಡ್ಡು ಮಾಡಬೇಕು ಅಂತಾ ಆಸೆ ಪಡ್ತಿದ್ದಾರೆ.

ಮೈತ್ರಿ ಸರ್ಕಾರ ಉರಳಿದ ಮೇಲೆ ರಾಜ್ಯದಲ್ಲಿ ನಡೆದ ಘಟನೆಗಳು ಜನರಿಗೆ ಗೊತ್ತಿದೆ. ಬಿಜೆಪಿಗೆ ಯಾವುದೇ ಮಾರ್ಗವಾದರೇನು ಸರ್ಕಾರ ರಚನೆ ಮಾಡಬೇಕಿತ್ತು. ನೀತಿ ನಿಯಮ ಇಲ್ಲದೇ ಸರ್ಕಾರ ರಚನೆ ಮಾಡಿದ್ದಾರೆ. ರಾಜ್ಯದಲ್ಲಿ ಅನರ್ಹ ಶಾಸಕರ ವಿರುದ್ಧದ ವಾತಾವರಣ ಕಾಣುತ್ತಿದೆ. ರಾಜ್ಯದ 15 ಕ್ಷೇತ್ರದ ಪೈಕಿ, ಬಿಜೆಪಿ ಒಂದೂ ಕ್ಷೇತ್ರದಲ್ಲಿ ಗೆಲ್ಲಲ್ಲ. ಕಳೆದ ಎರಡೂ ತಿಂಗಳಿಂದ ವಿಧಾನಸೌಧದಲ್ಲಿ ಸೂತಕದ ಛಾಯೆ ಆವರಿಸಿದೆ. ಯಾವ ಮಂತ್ರಿಯೂ ಕೆಲಸ ಮಾಡುತ್ತಿಲ್ಲ. ಚುನಾವಣೆ ಗೆಲ್ಲಬೇಕು,ಅದಕ್ಕಾಗಿ ಹಣ ಬೇಕು. ಹೀಗಾಗಿ ವರ್ಗಾವಣೆ ದಂಧೆ, ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಚಮಚಾಗಿರಿ ಮಾಡಿದವ್ರಿಗೆ ಮಾತ್ರ ಕಾಂಗ್ರೆಸ್​ನಲ್ಲಿ ಸ್ಥಾನಮಾನ ಎಂಬ ರಮೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ‌ ಅವರು, ರಮೇಶ್​ ಇಷ್ಟು ವರ್ಷ ಯಾಕೆ ಪಕ್ಷದಲ್ಲಿದ್ದರು. ಇವರು ಐದು ವರ್ಷ ಎಂಎಲ್‌ಎ ಇದ್ದಾಗ ಚಮಚಾಗಿರಿ ಮಾಡಿದ್ರಾ? 20 ವರ್ಷ ಬಿಜೆಪಿ ವಿರುದ್ಧ, ಸಮುದಾಯದ ವಿರುದ್ಧ ಇವರು ಮಾತನಾಡುತ್ತಾ ಬಂದಿದ್ದಾರೆ. ರಮೇಶ್ ಪಕ್ಷದಲ್ಲಿರುವುದು ಬಿಜೆಪಿಯವರಿಗೆ ಇರಿಸು ಮುರಿಸು ಇದೆ ಎಂದರು.

ಗೋಕಾಕ್​ನಲ್ಲಿ ಸ್ಥಳೀಯ ಮುಖಂಡರು,ಸತೀಶ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಿರಂತರವಾಗಿ ಜನರ ಸಂಪರ್ಕದಲ್ಲಿದ್ದು,ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ನಮಗೆ ಕಾನ್ಫಿಡೆನ್ಸ್ ಇದೆ. ರಮೇಶ್ ಜಾರಕಿಹೊಳಿಗೆ‌ ಸೋಲಿನ‌ ಭೀತಿ ಶುರುವಾಗಿದೆ. ಹೀಗಾಗಿ ಈಗ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಅಸಹಾಯಕತೆಯಿಂದ ಅವರು ಬಿಜೆಪಿ ಎಂಎಲ್‌ಎ, ಸಚಿವರನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ.

ಕಾಂಗ್ರೆಸ್ ಖಾಲಿ ಮಾಡ್ತೇನೆ ಎಂಬ ರಮೇಶ್ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಅವರು, ಕಾಂಗ್ರೆಸ್ ಖಾಲಿ ಮಾಡಲು ಸಾಧ್ಯವೇ ಇಲ್ಲ. ಮಹಾರಾಷ್ಟ್ರದಲ್ಲಿ ಈಗ ಮುಖಭಂಗ ಆಗಿಲ್ವಾ? ಇಲ್ಲಿಯೂ ಸಹ ದೊಡ್ಡ ಮುಖಭಂಗವಾಗುತ್ತೆ. ಬಿಎಸ್‌ವೈ ವಿರುದ್ಧವೇ ಅವರ ನಾಯಕರಿಗೆ ಅಸಮಧಾನ ಇದೆ. ಬಿಎಸ್‌ವೈ ಸಭೆಗಳಲ್ಲಿ ಮಾತನಾಡಿದ ವಿಡಿಯೋ ಬಿಡುಗಡೆ ಮಾಡ್ತಿದಾರೆ. ಇನ್ನೂ 13 ಶಾಸಕರು ನನ್ನ ಸಂಪರ್ಕದಲ್ಲಿದಾರೆ ಎಂಬ ರಮೇಶ್ ಹೇಳಿಕೆಗೆ,ಒಂದೂ ಕ್ಷೇತ್ರ ಗೆಲ್ಲಲ್ಲ ಅಂತ ಗೊತ್ತಿದೆ. ಅದಕ್ಕೆ ಸಂಪರ್ಕ ಮಾಡ್ತಿದಾರೆ. ಆಪರೇಷನ್ ಕಮಲ ಕಂಟಿನ್ಯೂ ಮಾಡ್ತೀವಿ ಅಂತಾ ಹೇಳ್ತಿದ್ದಾರೆ. ಅವರಿಗೇನಾದರೂ ಮಾನ ಮರ್ಯಾದೆ ಇದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Intro:ರಮೇಶ ಜಾರಕಿಹೊಳಿ ಬಿಜೆಪಿ ಪಕ್ಷ ಬಿಡುತ್ತಾರೆ-ದಿನೇಶ ಗುಂಡೂರಾವ್Body:ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಪತ್ರಿಕಾಗೋಷ್ಠಿ Conclusion:ಗೋಕಾಕ
Last Updated : Nov 27, 2019, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.