ETV Bharat / city

ಶಾಲಾ ಕೊಠಡಿಗಳು ಶಿಥಿಲಾವಸ್ಥೆ: ಮೈದಾನದಲ್ಲಿ ಟೆಂಟ್ ಹಾಕಿ ತರಗತಿಗೆ ಪಟ್ಟುಹಿಡಿದ ಗ್ರಾಮಸ್ಥರು - ಬೆಳಗಾವಿ ಪ್ರತಿಭಟನೆ ಸುದ್ದಿ

ರಾಮದುರ್ಗ ತಾಲೂಕಿನ ಮುದ್ದೇನೂರ ಗ್ರಾಮದ‌ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಹಿನ್ನೆಲೆ ಮೈದಾನದಲ್ಲೇ ಟೆಂಟ್ ಹಾಕಿ‌ ಮಕ್ಕಳಿಗೆ ಪಾಠ ಮಾಡುವಂತೆ ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

Dilapidated school room parents protest in Belagavi
ಶಾಲಾ ಕೊಠಡಿಗಳು ಶಿಥಿಲಾವಸ್ಥೆ: ಮೈದಾನದಲ್ಲಿ ಟೆಂಟ್ ಹಾಕಿ ತರಗತಿಗೆ ಪಟ್ಟುಹಿಡಿದ ಗ್ರಾಮಸ್ಥರು
author img

By

Published : May 16, 2022, 2:31 PM IST

Updated : May 16, 2022, 2:52 PM IST

ಬೆಳಗಾವಿ: ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆ ವಿದ್ಯಾರ್ಥಿಗಳ ಪೋಷಕರು ಶಾಲಾ ಆವರಣದಲ್ಲಿ ಟೆಂಟ್ ಹಾಕಿ ಅಲ್ಲಿಯೇ ತರಗತಿಗಳನ್ನು ತೆಗೆದುಕೊಳ್ಳಬೇಕೆಂದು ಪಟ್ಟುಹಿಡಿದಿದ್ದಾರೆ. ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭವಾಗಿದೆ. ಆದರೆ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳತ್ತ ಶಿಕ್ಷಣ ಇಲಾಖೆ ಗಮನ ಹರಿಸಿಲ್ಲ‌. ಪರಿಣಾಮ, ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದ ಪೋಷಕರು ಶಿಕ್ಷಣ ಇಲಾಖೆ ವಿರುದ್ಧ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ಶಾಲಾ ಆವರಣದಲ್ಲಿಯೇ ಟೆಂಟ್ ಹಾಕಿ ವಿದ್ಯಾರ್ಥಿಗಳ ಸ್ವಾಗತಿಸಿ, ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ‌.

ಶಾಲಾ ಕೊಠಡಿಗಳು ಶಿಥಿಲಾವಸ್ಥೆ: ಮೈದಾನದಲ್ಲಿ ಟೆಂಟ್ ಹಾಕಿ ತರಗತಿಗೆ ಪಟ್ಟುಹಿಡಿದ ಗ್ರಾಮಸ್ಥರು

ಮುದ್ದೇನೂರು ಸರ್ಕಾರಿ ಶಾಲೆಯಲ್ಲಿ 315 ಮಕ್ಕಳಿದ್ದು, 6 ಜನ ಶಿಕ್ಷಕರಿದ್ದಾರೆ. ಸತತ ಮಳೆಯಿಂದಾಗಿ 11 ಕೊಠಡಿಗಳ ಪೈಕಿ 9 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಯಾವಾಗ ಬೇಕಾದರೂ ಕೊಠಡಿಗಳ ಮೇಲ್ಛಾವಣಿ ಕುಸಿಯುವ ಭೀತಿ ಇದೆ. ಈಗಾಗಲೇ ಹಲವಾರು ಭಾರಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಹೀಗಾಗಿ ಮುದ್ದೇನೂರು ಗ್ರಾಮಸ್ಥರು ಶಾಲಾ ಮೈದಾನದಲ್ಲಿ ಟೆಂಟ್ ನಿರ್ಮಾಣ ಮಾಡಿ ಮಕ್ಕಳನ್ನ ಅದರಲ್ಲಿಯೇ ಕೂರಿಸಿ ಪಾಠ ಮಾಡುವಂತೆ ಶಿಕ್ಷಕರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಕೊಠಡಿಗಳಿಗೆ ಮಕ್ಕಳನ್ನ ಕಳುಹಿಸದಿರಲು ಗ್ರಾಮಸ್ಥರು ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ: ಬನ್ನಿ ಮಕ್ಕಳೇ ಶಾಲೆಗೆ.. ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭ; ಮಕ್ಕಳಿಗೆ ಅದ್ಧೂರಿ ಸ್ವಾಗತ

Last Updated : May 16, 2022, 2:52 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.